ಬೆಳ್ತಂಗಡಿ: ನಡ ಗ್ರಾಮದ ಸುರ್ಯ ಶ್ರೀ ಸದಾಶಿವರುದ್ರ ದೇವಸ್ಥಾನ ವತಿಯಿಂದ ದೇವಸ್ಥಾನದ ಅನಂತರತ್ನ ಸಭಾಭವನದಲ್ಲಿ ನಡ ಗ್ರಾಮದ 8 ಅಂಗನವಾಡಿ ಕೇಂದ್ರಗಳ 136 ಹಾಗೂ ಸ್ಥಳೀಯ ಶಾಲೆಯ 207 ಮಕ್ಕಳಿಗೆ ಸಮವಸ ವಿತರಣೆ ಹಾಗೂ ಅರ್ಹ, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ಮತ್ತು 7 ಜನರಿಗೆ ವೈದ್ಯಕೀಯ ಸಹಾಯಧನ ಹಾಗೂ 4 ವಿಶೇಷಚೇತನರಿಗೆ ಸಹಾಯಧನ ವಿತರಣೆ ನಡೆಯಿತು.
ದೇವಸ್ಥಾನ ಆನುವಂಶಿಕ ಆಡಳಿತ ಮೊಕ್ತೇಸರ ಡಾ.ಸತೀಶ್ಚಂದ್ರ ಸುರ್ಯ ಗುತ್ತು ಸಮವಸ ಹಾಗೂ ಪ್ರೋತ್ಸಾಹಧನ ವಿತರಿಸಿದರು.
ಪ್ರಮುಖರಾದ ಸಂದೀಪಾ ಸತೀಶ್ಚಂದ್ರ, ಧಾರಿಣಿ ಎಸ್.ಜೈನ್, ಸಂಗ್ರಾಮ್ ಸುರ್ಯಗುತ್ತು, ದೇವಸ್ಥಾನದ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಬಿ.ರಾಜಶೇಖರ ಅಜ್ರಿ, ಬಿ.ಮುನಿರಾಜ ಅಜ್ರಿ, ಅಜಿತ್ ಆರಿಗ, ಸಂಪತ್ ಕುಮಾರ್, ನಡ ಗ್ರಾಪಂ ಸದಸ್ಯರಾದ ಸುಮಿತ್ರಾ ಮೊದಲಾದವರಿದ್ದರು.