ಜಿಲ್ಲೆ

ಸೂರ್ಯ ನಮಸ್ಕಾರ ಸ್ಪರ್ಧೆ ವಿಜೇತರು

ಹುಬ್ಬಳ್ಳಿ: ಇಲ್ಲಿಯ ಯುವಯೋಧ ಪ್ರತಿಷ್ಠಾನ ಮತ್ತು ಕನಕದಾಸ ಶಿಕ್ಷಣ ಸಮಿತಿ ಆಶ್ರಯದಲ್ಲಿ ವಿದ್ಯಾನಗರದಲ್ಲಿ ಇತ್ತೀಚೆಗೆ ಸೂರ್ಯನಮಸ್ಕಾರ ಸ್ಪರ್ಧೆ ಏರ್ಪಡಿಸಲಾಗಿತ್ತು.

ಉದ್ಘಾಟನೆ ಸಮಾರಂಭದಲ್ಲಿ ಶಾಸಕ ಮಹೇಶ ಟೆಂಗಿನಕಾಯಿ, ಕೆಎಸ್ಎಸ್ ಸಂಸ್ಥೆಯ ಕಾರ್ಯದಶಿರ್ ರವೀಂದ್ರನಾಥ ದಂಡಿನ, ಉಪಾಧ್ಯಕ್ಷ ಶಾಂತಣ್ಣ ಕಡಿವಾಲ, ಯೋಗ ಗುರುಗಳಾದ ಭವರಲಾಲ್ ಆರ್ಯ, ವಿನಾಯಕ ತಲಗೇರಿ, ದತ್ತಾತ್ರೇಯ ಭಟ್, ಪಂಚಲಿಂಗಪ್ಪ ಕವಲೂರು, ಮುತ್ತಪ್ಪ ಮಡಿವಾಳರ, ಮುತ್ತಪ್ಪ ನಲವಡಿ, ಪ್ರಾಚಾರ್ಯ ಸಂದೀಪ ಬೂದಿಹಾಳ, ಕೇಶವ ಬಾದನಟ್ಟಿ, ಪಾಲ್ಗೊಂಡಿದ್ದರು.

ಸ್ಪರ್ಧೆಯಲ್ಲಿ ನಿರೀಕ್ಷಿತಾ ಡೊಳ್ಳಿನ ಪ್ರಥಮ, ಅಭಿಷೇಕ ಪಲ್ಲೇದ ದ್ವೀತಿಯ, ಭಾಗ್ಯಶ್ರೀ ಬಳಗಾನೂರಮಠ ತೃತೀಯ ಹಾಗೂ ಜಯಂತ ಪೂಜಾರ ಸಮಾಧಾನಕರ ಬಹುಮಾನ ಪಡೆದರು.
ನಿರ್ಣಾಯಕರಾಗಿ ಸ್ವಪ್ನಾ ಕರಬಶೆಟ್ಟರ ಹಾಗೂ ಮುತ್ತಣ್ಣ ಮಡಿವಾಳರ ಭಾಗವಹಿಸಿದ್ದರು.

ಯುವಯೋಧ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ಮುತ್ತಪ್ಪ ನಲವಡಿ ಕಾರ್ಯಕ್ರಮ ಸಂಯೋಜಿಸಿದ್ದರು.