ಜಿಲ್ಲೆ

ಸೂರ್ಯನಮಸ್ಕಾರ ಸ್ಪರ್ಧೆ ಯಶಸ್ವಿ

Dharwada - Basavaraj Idli

ಹುಬ್ಬಳ್ಳಿ: ಯುವಯೋಧ ಪ್ರತಿಷ್ಠಾನ ಮತ್ತು ಕನಕದಾಸ ಶಿಣ ಸಮಿತಿ ವತಿಯಿಂದ ವಿದ್ಯಾನಗರದ ಡಾ. ದಂಡಿನ್ ಸಭಾಂಗಣದಲ್ಲಿ ಶನಿವಾರ ಅಜೀತಕುಮಾರಜೀ ಅವರ ಪ್ರೇರಣೆಯಿಂದ "ಸೂರ್ಯನಮಸ್ಕಾರ ಸ್ಪರ್ಧೆ' ಏರ್ಪಡಿಸಲಾಗಿತ್ತು.

ಶಾಸಕ ಮಹೇಶ ಟೆಂಗಿನಕಾಯಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕೆಎಸ್ಎಸ್ ಸಂಸ್ಥೆಯ ಕಾರ್ಯದಶಿರ್ ರವೀಂದ್ರ ದಂಡಿನ, ಉಪಾಧ್ಯ ಶಾಂತಣ್ಣ ಕಡಿವಾಲ, ಯೋಗಗುರುಗಳಾದ ಭಾವರಲಾಲ್ ಆರ್ಯ, ವಿನಾಯಕ ತಲಗೇರಿ, ದತ್ತಾತ್ರೇಯ ಭಟ್, ಪಂಚಲಿಂಗಪ್ಪ ಕವಲೂರು, ಮುತ್ತಪ್ಪ ಮಡಿವಾಳರ, ಮುತ್ತಪ್ಪ ನಲವಡಿ, ಪ್ರಾಚಾರ್ಯ ಸಂದೀಪ ಬೂದಿಹಾಳ, ಕೇಶವ ಬಾದನಟ್ಟಿ, ಶಶಿಧರ್ ಅಕ್ಕಿ, ಸೂರ್ಯ ನಮಸ್ಕಾರ ಸ್ಪಧಿರ್ಗಳು ಉಪಸ್ಥಿತರಿದ್ದರು.

ಪ್ರಥಮ ಬಹುಮಾನವನ್ನು ನಿರೀತ ಡೊಳ್ಳಿನ, ದ್ವೀತಿಯ ಅಭಿಷೇಕ ಪಲ್ಲೇದ ಹಾಗೂ ತತೀಯ ಬಹುಮಾನವನ್ನು ಭಾಗ್ಯಶ್ರೀ ಬಳಗಾನೂರಮಠ ಹಾಗೂ ಸಮಾಧಾನಕರ ಬಹುಮಾನವನ್ನು ಜಯಂತ ಪೂಜಾರ ಪಡೆದರು.

ನಿರ್ಣಾಯಕರಾಗಿ ಸ್ವಪ್ನಾ ಕರಬಶೆಟ್ಟರ ಹಾಗೂ ಮುತ್ತಣ್ಣ ಮಡಿವಾಳರ ಭಾಗವಹಿಸಿದ್ದರು.
ಯುವಯೋಧ ಪ್ರತಿಷ್ಠಾನದ ಸಂಸ್ಥಾಪನಾ ಅಧ್ಯ ಮುತ್ತಪ್ಪ ನಲವಡಿ ಕಾರ್ಯಕ್ರಮ ಸಂಯೋಜಿಸಿದರು.