ಕೋಟ: ಸರ್ಕಾರಿ ಶಾಲೆಗಳ ಉಳಿವಿಗೆ ಪಾಲಕರ ಹಾಗೂ ಹಳೇ ವಿದ್ಯಾರ್ಥಿಗಳ ಪಾತ್ರ ಮಹತ್ವವಾದದ್ದು ಎಂದು ಬ್ರಹ್ಮಾವರ ವಲಯ ಶಿಕ್ಷಣ ಸಂಯೋಜಕ ಉದಯ್ ಕುಮಾರ್ ಹೇಳಿದರು.
ಶನಿವಾರ ಕೋಟತಟ್ಟು ಪಡುಕರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಉಡುಪಿಯ ರೋಬೋ ಸಾಫ್ಟ್ ಕಂಪನಿ ಕೊಡಮಾಡಿದ ಲ್ಯಾಪ್‌ಟಾಪ್, ಪ್ರಾಜೆಕ್ಟರ್, ಯುಪಿಎಸ್ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡಿದರು.
ರೋಬೋ ಸಾಫ್ಟ್ ಕಂಪನಿಯ ಎಚ್.ಆರ್ ಮಧುರಾ ಶೆಟ್ಟಿ ಅವರು ಮುಖ್ಯ ಶಿಕ್ಷಕಿ ಜಾನಕಿ ಭಟ್ ಅವರಿಗೆ ಕೊಡುಗೆಗಳನ್ನು ಹಸ್ತಾಂತರಿಸಿದರು. ಎಸ್‌ಡಿಎಂಸಿ ಅಧ್ಯಕ್ಷ ಸುಲೇಮಾನ್ ಸಾಹೇಬ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅಭ್ಯಾಗತರಾಗಿ ರೋಬೋ ಕಂಪನಿಯ ಶರತ್, ಕೋಟತಟ್ಟು ಗ್ರಾಮ ಪಂಚಾಯಿತಿ ಸದಸ್ಯೆ ವಿದ್ಯಾ ಸಾಲಿಯಾನ್, ಮಾತೆಯರ ಸಮಿತಿ ಅಧ್ಯಕ್ಷೆ ಅನಿತಾ ಉಪಸ್ಥಿತರಿದ್ದರು. ಜಾನಕಿ ಭಟ್ ಸ್ವಾಗತಿಸಿದರು. ಗಣೇಶ್ ಆಚಾರ್ ನಿರೂಪಿಸಿದರು.