ಮಡಿಕೇರಿ: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಜಿಲೆಯಲ್ಲಿ ಶೇ.೭೭.೮೬ ರಷ್ಟು ಪ್ರಗತಿ ಸಾಧಿಸಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಎ.ಎಸ್.ದೀಪಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲೆಯ ಎಲ್ಲಾ ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಕುರಿತು ನಿಖರವಾದ ಮಾಹಿತಿ ಸಂಗ್ರಹಿಸುವ ಕಾರ್ಯವು ಜಿಲ್ಲೆಯಾದ್ಯಂತ ನಡೆಯುತ್ತಿದೆ. ಈಗಾಗಲೇ ಗುರುತಿಸಲಾಗಿರುವ ಎಲ್ಲಾ ಮನೆಗಳಿಗೆ ಗಣತಿದಾರರು ಭೇಟಿ ನೀಡಿ, ಗಣತಿ ಕಾರ್ಯ ನಡೆಸುತ್ತಿದ್ದು, ಸಾರ್ವಜನಿಕರು ಕೂಡ ಸ್ವಯಂ ಆಗಿ ತಮ್ಮ ಮನೆಯ ಗಣತಿ ಮಾಡಿಕೊಳ್ಳಲು ಅನುಕೂಲವಾಗುವಂತೆ ಸೌಲಭ್ಯ ಸಿದ್ಧಪಡಿಸಲಾಗಿದೆ ಎಂದು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಸಂಬಂಧಿಸಿದಂತೆ ೧೧೩೧ ಬ್ಲಾಕ್‌ಗಳಿದ್ದು, ಇದರಲ್ಲಿ ೧,೩೪,೩೯೬ ಕುಟುಂಬಗಳ ಗುರಿಯಲ್ಲಿ ಈಗಾಗಲೇ ೧,೦೪,೬೪೪ ಕುಟುಂಬಗಳ ಸಮೀಕ್ಷೆ ಆಗಿದ್ದು, ಶೇ.೭೭.೮೬ ರಷ್ಟು ಸಮೀಕ್ಷೆ ನಡೆದಿದೆ. ತಾಲೂಕುವಾರು ಗಮನಿಸಿದಾಗ ಕುಶಾಲನಗರ ತಾಲೂಕಿನಲ್ಲಿ ೩೦೪ ಬ್ಲಾಕ್‌ಗಳಲ್ಲಿ ೩೪,೬೩೭ ಕುಟುಂಬಗಳಲ್ಲಿ ೨೬,೮೧೯ ಕುಟುಂಬಗಳ ಸಮೀಕ್ಷೆ ಆಗಿದೆ.
ಮಡಿಕೇರಿ ತಾಲೂಕಿನಲ್ಲಿ ೨೬೪ ಬ್ಲಾಕ್‌ಗಳಲ್ಲಿ ೩೫,೧೨೭ ಕುಟುಂಬಗಳಲ್ಲಿ ೨೫,೬೧೦ ಕುಟುಂಬಗಳ ಸಮೀಕ್ಷೆ ಆಗಿದೆ. ಪೊನ್ನಂಪೇಟೆ ತಾಲೂಕಿನಲ್ಲಿ ೮೭ ಬ್ಲಾಕ್‌ಗಳಲ್ಲಿ ೧೦,೩೩೭ ಕುಟುಂಬಗಳಲ್ಲಿ ೮,೭೪೩ ಕುಟುಂಬಗಳ ಸಮೀಕ್ಷೆ ಆಗಿದೆ. ಸೋಮವಾರಪೇಟೆ ತಾಲೂಕಿನಲ್ಲಿ ೨೬೬ ಬ್ಲಾಕ್‌ಗಳಲ್ಲಿ ೨೯,೪೦೨ ಕುಟುಂಬಗಳ ಗುರಿಯಲ್ಲಿ ೨೪,೪೨೮ ಕುಟುಂಬಗಳ ಸಮೀಕ್ಷೆ ಆಗಿದೆ. ವಿರಾಜಪೇಟೆ ತಾಲ್ಲೂಕಿನಲ್ಲಿ ೨೧೦ ಬ್ಲಾಕ್‌ಗಳಲ್ಲಿ ೨೪,೮೯೩ ಕುಟುಂಬಗಳ ಗುರಿಯಲ್ಲಿ ೧೯,೦೪೪ ಕುಟುಂಬಗಳ ಸರ್ವೇ ಆಗಿದೆ ಎಂದು ಎ.ಎಸ್.ದೀಪಕ್ ತಿಳಿಸಿದ್ದಾರೆ.