ಅಂಕಲಿ ಗ್ರಾಮದ ಶಿವಾಲಯದಲ್ಲಿ ಹಮ್ಮಿಕೊಂಡಿರುವ ಪ್ರವಚನ ಕಾರ್ಯಕ್ರಮಕ್ಕೆ ಗ್ರಾಪಂ ಸದಸ್ಯ ಸುರೇಶ ಪಾಟೀಲ ಉದ್ಘಾಟಿಸಿದರು. ಅಣ್ಣಾಸಾಹೇಬ ಜಕಾತಿ, ವಿವೇಕ ಕಮತೆ, ವಿವೇಕ ನಷ್ಟೇ, ತಮ್ಮನಿ ಗುಂಡುಕಲೆ, ಬಿ.ಎಂ.ಕೋರೆ ಇತರರು ಇದ್ದರು. 
ಜಿಲ್ಲೆ

ಶರಣರ ಆಶಯಗಳು ಸಾರ್ವಕಾಲಿಕ

ಪ್ರಶಾಂತ ಹೂಗಾರ

ಮಾಂಜರಿ: ಶರಣರ ವಚನಗಳು ಸಾರ್ವಕಾಲಿಕವಾಗಿದ್ದು, ಸಮ ಸಮಾಜ ನಿರ್ಮಾಣ ಮಾಡುವುದೇ ಶರಣರ ಆಶಯವಾಗಿತ್ತು ಎಂದು ಅಂಕಲಿ ಗ್ರಾಮ ಪಂಚಾಯಿತಿ ಸದಸ್ಯ ಸುರೇಶ ಪಾಟೀಲ ತಿಳಿಸಿದರು.

ಸಮೀಪದ ಅಂಕಲಿ ಗ್ರಾಮದ ಶಿವಾಲಯದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಹಮ್ಮಿಕೊಂಡಿರುವ ಪ್ರವಚನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶರಣರು ಹಾಕಿದ ಮಾರ್ಗದಲ್ಲಿ ಎಲ್ಲರೂ ಸಾಗಬೇಕು ಎಂದರು.

ಶಿವಾಲಯ ಕಮಿಟಿ ಸದಸ್ಯ ಅಣ್ಣಾಸಾಹೇಬ ಜಕಾತಿ, ವಿವೇಕ ಕಮತೆ, ವಿವೇಕ ನಷ್ಟೇ, ತಮ್ಮನಿ ಗುಂಡುಕಲೆ, ಬಿ.ಎಂ.ಕೋರೆ ಇತರರಿದ್ದರು. ಕಮಿಟಿ ಕಾರ್ಯದರ್ಶಿ ನಾಗೇಶ ಮಜುಕರ ನಿರೂಪಿಸಿ, ವಂದಿಸಿದರು.