ವಿಜಯಪುರ : 12ನೇ ಶತಮಾನದಲ್ಲಿ ಅನೇಕ ಶರಣರು ಸರಳವಾಗಿ ತಮ್ಮನ ಜೀವನ ಉದ್ದಕ್ಕೂ ವಚನಗಳ ಕೊಟ್ಟಿರೋದು ನಮ್ಮೆಲ್ಲರ ಸೌಭಾಗ್ಯ ಎಂದು ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ್ ಹೇಳಿದರು.
ನಗರದ ಜ್ಞಾನಯೋಗಾಶ್ರಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಚನಗಳನ್ನು ನಮ್ಮ ಬದುಕಿನ ಉದ್ದಕ್ಕೂ ಬಳಸಿಕೊಳ್ಳುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ನೆಮ್ಮದಿ, ಶಾಂತಿ, ಸಂತೋಷ ಸಿಗಬೇಕಾದರೆ ಪೂಜ್ಯರನ್ನು ಶರಣ-ಸಂತರ ದರ್ಶನ ಪಡೆಯಬೇಕು ಹಾಗೂ ಒಳ್ಳೆ ಆಡಳಿತ ಜೀವನ ನಡೆಸಬೇಕಾದರೆ ಹಸಿದ ಹೊಟ್ಟೆಗೆ ಅನ್ನವು ಹೇಗೆ ಬಂಗಾರವು ಆನಂದದ ಬದುಕಿಗೆ ವಚನ ಸಾಹಿತ್ಯ ಅಷ್ಟೇ ಮುಖ್ಯ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಆಶ್ರಮದ ಮುಖ್ಯಸ್ಥ ಬಸವಲಿಂಗ ಸ್ವಾಮೀಜಿ ಮಾತನಾಡಿ, ಅಧಿಕಾರಿಗಳಿದ್ದರೂ ಶರಣರ ನುಡಿಗಳನ್ನು ಮನದಲ್ಲಿ ಮೂಡಿಸಿಕೊಂಡು ಅನೇಕ ಸಾಮಾಜಿಕ ಕಾರ್ಯದಲ್ಲಿ ತೊಡಗಿರುವುದು ಸಂತೋಷ ತಂದಿದೆ. ಗಡಿನಾಡು ಕನ್ನಡ ಪ್ರಾಧಿಕಾರದ ಅಧ್ಯಕ್ಷರು ಆಶ್ರಮಕ್ಕೆ ಭೇಟಿ ನೀಡಿದ್ದು ಖುಷಿ ತಂದಿದೆ. ಇನ್ನು ಕನ್ನಡ ಮಾತೆಯ ಹೆಚ್ಚು ಕೆಲಸಗಳು ಆಗಲಿ ಎಂದು ಶುಭ ಹಾರೈಸಿದರು.
ಶ್ರೀ ಸಿದ್ದೇಶ್ವರ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ಶ್ರೀ ಶ್ರದ್ಧಾನಂದ ಸ್ವಾಮೀಜಿ, ಸಾಹಿತಿ ವಿ.ಸಿ.ನಾಗಠಾಣ, ಹಲವಾರು ಪೂಜ್ಯರು, ಸಾವಿರಾರು ಭಕ್ತ ಸಮೂಹ ಇದ್ದರು.