ಮಳವಳ್ಳಿ: ಶರಣರ ವಚನ ಮತ್ತು ಬದುಕು ಸಾರ್ವಕಾಲಿಕ ಅದರ್ಶವಾಗಿದ್ದು, ಬಸವಣ್ಣನ ಚಿಂತನೆ ಮತ್ತು ಶರಣ ತತ್ವವನ್ನು ಮುಂದಿನ ಪೀಳಿಗೆಗೆ ಪರಿಚಯಿಸಲು ಶರಣರ ಸಂಘಟನಾ ವೇದಿಕೆ ಶ್ರಮಿಸುತ್ತಿದೆ ಎಂದು ವೇದಿಕೆ ಸಂಸ್ಥಾಪಕ ಅಧ್ಯಕ್ಷ ಕೆ.ಕೆ.ಹಳ್ಳಿ ನಂದೀಶ್ ತಿಳಿಸಿದರು.
ಪಟ್ಟಣದ ಶಂಕರಮಠದ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಪದಾಧಿಕಾರಿಗಳ ಆಯ್ಕೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಭೌತಿಕ, ಆಧ್ಯಾತ್ಮಿಕ ಜೀವನದ ಬಗ್ಗೆ ಅತ್ಯಮೂಲ್ಯ ಸಂದೇಶವನ್ನು ಹೊಂದಿರುವ ಶರಣರ ಸಾಹಿತ್ಯವನ್ನು ಯುವ ಸಮೂಹ ಕಲಿತು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದರು.
ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಾಧಕರನ್ನು ಗುರುತಿಸಿ ಅಭಿನಂದಿಸುವ ಮೂಲಕ ನವ ಸಮಾಜ ನಿರ್ಮಾಣಕ್ಕೆ ನಮ್ಮ ವೇದಿಕೆ ಆಶಯವಾಗಿದೆ ಎಂದ ಅವರು, ಅದರಂತೆ ಎಲ್ಲ ತಾಲೂಕು ಘಟಕಗಳಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಸಂಘಟನೆಯನ್ನು ಬಲಿಷ್ಠಗೊಳಿಸಲಾಗುತ್ತಿದೆ ಎಂದು ತಿಳಿಸಿದರು.
ಶರಣರ ಸಂಘಟನೆ ವೇದಿಕೆ ಗೌರವ ಪ್ರವರ್ತಕ ಭಭ್ರುವಾಹನ ಮಾತನಾಡಿ, ಶರಣರ ತತ್ವ ನಶಿಸಿ ಹೋಗುತ್ತಿರುವುದರಿಂದ ಎಲ್ಲ ಜಾತಿ ಧರ್ಮದರವರಲ್ಲಿಯೂ ಶರಣ ಸಂತತಿ ಹುಟ್ಟಿಸುವ ನಿಟ್ಟಿನಲ್ಲಿ ಎಲ್ಲರೂ ಕಾರ್ಯೋನ್ಮುಖರಾಗಬೇಕು ಎಂದು ಸಲಹೆ ನೀಡಿದರು.
ನೂತನ ಪದಾಧಿಕಾರಿಗಳ ಆಯ್ಕೆ: ಶರಣರ ಸಂಘಟನೆ ವೇದಿಕೆ ಮುಖ್ಯ ಪ್ರವರ್ತಕರಾಗಿ ಬಭ್ರುವಾಹನ, ಗೌರವ ಅಧ್ಯಕ್ಷ ಬಿ.ಎಂ. ರಮೇಶ್, ತಾಲೂಕು ಅಧ್ಯಕ್ಷ ಸುಬ್ರಮಣ್ಯಸ್ವಾಮಿ, ಉಪಾಧ್ಯಕ್ಷ ಕನ್ನಹಳ್ಳಿ ಬಸವರಾಜು, ಪ್ರಧಾನ ಕಾರ್ಯದರ್ಶಿ ಸುರೇಶ್, ಸಂಘಟನಾ ಕಾರ್ಯದರ್ಶಿ ಹೆಬ್ಬಣಿ ಮಹೇಶ್, ಯುವ ಘಟಕ ಅಧ್ಯಕ್ಷ ಸಂಶೆಟ್ಟಿಪುರ ಬಸವರಾಜು, ಗೌರವ ಸಲಹೆಗಾರ ನಾಗಪ್ರಸಾದ್, ಕಿರುಗಾವಲು ಹೋಬಳಿ ಅಧ್ಯಕ್ಷ ಹಂಗ್ರಪುರ ಮಹೇಶ್, ಕಸಬಾ ಹೋಬಳಿ ಅಧ್ಯಕ್ಷ ಗೌಡಗೆರೆ ಪ್ರಮೋದ್, ಬಿ.ಜಿ.ಪುರ ಹೋಬಳಿ ಅಧ್ಯಕ್ಷ ಬಿಳಿಜಗಲಿಮೋಳೆ ನಂಜುಂಡಸ್ವಾಮಿ ಮತ್ತು ಬಿ.ಜಿ.ಪುರ ಶಿವು, ನೆಟ್ಕಲ್ ಚಂದ್ರು, ಜಗದೀಶ್, ಸಿದ್ದಲಿಂಗಸ್ವಾಮಿ, ರಾಜಣ್ಣ ಅವರನ್ನು ನಿರ್ದೇಶಕರಾಗಿ ಆಯ್ಕೆ ಮಾಡಲಾಯಿತು. ವೇದಿಕೆ ಉಪಾಧ್ಯಕ್ಷ ಮೆಣಸಗೆರೆ ಶಿವಲಿಂಗಪ್ಪ ಸೇರಿದಂತೆ ಇತರ ಮುಖಂಡರು ಇದ್ದರು.