ಕಂಬಳಿಹಾಳ ಗ್ರಾಮದಲ್ಲಿ ಆಯೋಜಿಸಿದ್ದ ಪುರಾಣ ಮಂಗಲ ಕಾರ್ಯಕ್ರಮದಲ್ಲಿ ಸಜ್ಜಲಗುಡ್ಡದ ಶರಣಮ್ಮ ತಾಯಿ ಪುರಾಣ ಕೃತಿಯನ್ನು ಬಿಡುಗಡೆಗೊಳಿಸಲಾಯಿತು. ಸಜ್ಜಲಗುಡ್ಡದ ದೊಡ್ಡಬಸವ ಸ್ವಾಮೀಜಿ, ನಂದವಾಡಗಿಯ ಚನ್ನಬಸವ ಸ್ವಾಮೀಜಿ, ಸಾಹಿತಿ ಗಿರಿರಾಜ ಹೊಸಮನಿ ಹಾಗೂ ಶಿವಕುಮಾರ್ ಕಲಬುರಗಿ ಇತರರಿದ್ದರು. 
ಜಿಲ್ಲೆ

ಶರಣರ ತತ್ವಾದರ್ಶ ಮೈಗೂಡಿಸಿಕೊಳ್ಳಿ

ರುದ್ರಪ್ಪ ವಾಲಿ

ಮುದಗಲ್: ಪುರಾಣ-ಪ್ರವಚನ ಕೇಳಿ ಅದರಲ್ಲಿರುವ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅಭಿನವ ಪ್ರಭು ಚನ್ನಬಸವ ಸ್ವಾಮೀಜಿ ಹೇಳಿದರು.

ಸಮೀಪದ ಕಂಬಳಿಹಾಳ ಗ್ರಾಮದಲ್ಲಿ ಸಜ್ಜಲಗುಡ್ಡದ ಶರಣಮ್ಮ ಜಾತ್ರೆ ನಿಮಿತ್ತ ಏರ್ಪಡಿಸಿದ್ದ ಪುರಾಣ ಮಂಗಲ ಕಾರ್ಯಕ್ರಮದಲ್ಲಿ ಮಾತನಾಡಿದರು. ಶರಣರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕು ಎಂದ ಅವರು, ಸಜ್ಜಲಗುಡ್ಡದ ಶರಣಮ್ಮ ತಾಯಿ ಅನೇಕ ಪವಾಡಗಳನ್ನು ನಡೆಸಿದ ಪ್ರಸಂಗಗಳನ್ನು ಭಕ್ತರಿಗೆ ತಿಳಿಸಿದರು. ಶ್ರೀಮಠದಲ್ಲಿ ವಿಶೇಷ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮ, ಅನ್ನಸಂತರ್ಪಣೆ ಜರುಗಿತು. ಸಂಜೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಮಹಾರಥೋತ್ಸವ ಜರುಗಿತು. ಸಜ್ಜಲಗುಡ್ಡದ ಶಿವಶರಣೆ ಶರಣಮ್ಮ ಅಮ್ಮನವರ ಪುರಾಣ ಕೃತಿಯನ್ನು ಬಿಡುಗಡೆಗೊಳಿಸಲಾಯಿತು.

ಗುಡದೂರಿನ ಶ್ರೀ ನೀಲಕಂಠಯ್ಯ ತಾತನಿಗೆ ತುಲಾಭಾರ ಸೇವೆ ನೆರವೇರಿಸಲಾಯಿತು. ಸಜ್ಜಲಗುಡ್ಡ, ನಂದವಾಡಗಿ, ನಾಗರಹಾಳ, ಮುದಗಲ್ ಮಾತ್ರವಲ್ಲದೆ ಪಕ್ಕದ ಬಾಗಲಕೋಟೆ ಹಾಗೂ ಕೊಪ್ಪಳ ಜಿಲ್ಲೆಯ ಭಕ್ತರು ಭಾಗವಹಿಸಿದ್ದರು.