ಉಗರಗೋಳ: ಸಮಸಮಾಜ ನಿರ್ಮಾಣದ ಆಶಯ ಹೊತ್ತು ಶ್ರಮಿಸಿದ ವಚನಕಾರರಲ್ಲಿ ಅಂಬಿಗರ ಚೌಡಯ್ಯ ಒಬ್ಬರಾಗಿದ್ದಾರೆ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.
ಗ್ರಾಮದಲ್ಲಿ ಶ್ರೀಗಂಗಾ ಪರಮೇಶ್ವರಿ ಸೇವಾ ಸಮಿತಿ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ನಿಜಶಿವಶರಣ ಅಂಬಿಗರ ಚೌಡಯ್ಯ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶರಣರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ಸಾಗಿದರೆ ನಮ್ಮ ಬದುಕು ಸುಂದರವಾಗಿರುತ್ತದೆ. ನಮ್ಮೊಳಗಿನ ಜ್ಞಾನ ಮಾತ್ರ ಶಾಶ್ವತವಾದ ಸಂಪತ್ತು, ಸಂಸ್ಕಾರವಾಗಿದೆ. ಅಂಬಿಗರ ಚೌಡಯ್ಯ ಸಮುದಾಯ ಭವನ ನಿರ್ಮಾಣಕ್ಕೆ 20 ಲ ರೂ. ನೀಡುವ ಭರವಸೆ ನೀಡಿದರು.
ಚೌಡಯ್ಯ ಭಾವಚಿತ್ರದ ಮೆರವಣಿಗೆ ಅದ್ದೂರಿಯಾಗಿ ಜರುಗಿತು. ಗೊಂಬೆ ಕುಣಿತ, ಡೊಳ್ಳು ಮೇಳ, ಭಜನೆ, ಕರಡಿ ಮಜಲು, ಜಾಂಜ್ಪಥಕ್, ಸುಮಂಗಲೆಯರ ಕುಂಭಮೇಳ ಗಮನ ಸೆಳೆಯಿತು. ಬ್ರಹ್ಮಾರೂಢ ಶ್ರೀಗಳು, ಗುರುಮಹಾಂತ ಶ್ರೀಗಳು, ಗಂಗಾರಾಮ ತಳವಾರ, ಸವದತ್ತಿ ಎಪಿಎಂಸಿ ಮಾಜಿ ಅಧ್ಯ ಪ್ರಭು ಪ್ರಭುನವರ, ಶಿದ್ದನಗೌಡ ಗೂಡ್ರಾಶಿ, ಪ್ರಕಾಶ ಲಮಾಣಿ, ಭೀಮಣ್ಣ ಬಾರ್ಕಿ, ರೇಣಪ್ಪ ಮಂಗಳಾರ್ತಿ, ವೈ.ವೈ. ಕಾಳಪ್ಪನವರ, ಯಲ್ಲಪ್ಪ ಕಬ್ಬೇರ, ಸೋಮಲಿಂಗ ಸುಣಗಾರ, ಶಿವಾನಂದ ಮಂಗಳಾರ್ತಿ, ಸತೀಶ ಚಿರಚನವರ, ಮಾರುತಿ ಶಿಂಧೆ, ಕೀರಪ್ಪ ಸಂಗಪ್ಪಗೋಳ, ಪರಸಪ್ಪ ಇಮ್ರಾಂಪೂರ, ರಾಜೇಶ ಅಂಗಡಿ, ಏಕನಗೌಡ ತಿಪರಾಶಿ, ಮಂಜುನಾಥ ಭಾವಲಿ, ಗೋವಿಂದಗೌಡ ತಿಪರಾಶಿ, ನಾಗರಾಜ ಮಾರಿಹಾಳ, ಮಂಜುನಾಥ ಯಕ್ಕುಂಡಿ, ಮಲ್ಲಿಕಾರ್ಜುನ ಹಾವನ್ನವರ, ಅಶೋಕ ಬಾರ್ಕಿ, ನಾಮದೇವ ಹುಲಗಣ್ಣವರ, ಸಂಜು ಮುತ್ತನ ಉಗರಗೋಳ, ಮಂಜು ಬಾವಲಿ, ಮುತ್ತಯ್ಯ ತೋರಗಲ್ಮಠ, ಬಸವರಾಜ ಬಾರ್ಕಿ ಇತರರಿದ್ದರು.