ಉಳ್ಳಾಗಡ್ಡಿ-ಖಾನಾಪುರ: ಕಲ್ಲಪ್ಪ ಹರಿಜನ ಅವರು ಶರಣರ ಚಿಂತನಗೋಷ್ಠಿ ಏರ್ಪಡಿಸಿರುವ ಕಾರ್ಯ ಶ್ಲಾಘನೀಯ ಎಂದು ಘೋಡಗೇರಿ ಶಿವಾನಂದ ಮಠದ ಮಲ್ಲಯ್ಯ ಸ್ವಾಮೀಜಿ ಹೇಳಿದರು.
ಸಮೀಪದ ಅಂಕಲಗುಡಿ ಗ್ರಾಮದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಶರಣರ ಚಿಂತನ ಗೋಷ್ಠಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಚಿಂತನ ಗೋಷ್ಠಿ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಹುಣಸಿಕೊಳ್ಳ ಮಠದ ರಾಚೋಟೇಶ್ವರ ಸ್ವಾಮೀಜಿ ಮಾತನಾಡಿ, ಬಸವಣ್ಣನವರ ದಾರಿಯಲ್ಲಿ ನಡೆದರೆ ಸದೃಢ ಮತ್ತು ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದರು.
ಹುಣಸಿಕೊಳ್ಳ ಮಠದ ಉತ್ತರಾಧಿಕಾರಿ ಸಿದ್ಧಬಸವ ದೇವರು ಮಾತನಾಡಿ, ಒಳ್ಳೆಯ ಆಚಾರ-ವಿಚಾರ ಬದುಕಿನಲ್ಲಿ ಅಳವಡಿಸಿಕೊಂಡಾಗ ಮಾತ್ರ ಸುಂದರ ಸಮಾಜ ನಿರ್ಮಾಣವಾಗುವುದು ಎಂದು ತಿಳಿಸಿದರು.
ರಾಮಣ್ಣ ಬಂದಾಯಿ, ಶಂಕರ ಗುಡಸ ಮಾತನಾಡಿದರು. ಮಾವನೂರ ಗ್ರಾಪಂ ಅಧ್ಯಕ್ಷ ಶಿವಲಿಂಗ ಹೆಬ್ಬಾಳ, ಕಲ್ಲಪ್ಪ ಹರಿಜನ. ಬಸವರಾಜ ಮಣಗುತ್ತಿ, ಬಸವರಾಜ ದೇವರಮನಿ ಇತರರಿದ್ದರು.