ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ
ವಿಶ್ವಗುರು ಶ್ರೀಮಧ್ವಾಚಾರ್ಯ ಮಹಾಸಂಸ್ಥಾನ ಶ್ರೀಸತ್ಯತೀರ್ಥ ಪೀಠ ಉಡುಪಿ ಭಂಡಾರಕೇರಿಮಠಾಧೀಶ ಶ್ರೀವಿದ್ಯೇಶತೀರ್ಥ ಶ್ರೀಪಾದಂಗಳವರ ಸಪ್ತತಿ (70 ಸಂವತ್ಸರ) ಮಹೋತ್ಸವ ಶನಿವಾರ ಬೆಂಗಳೂರು ಗಿರಿನಗರ ಭಾಗವತ ಕೀರ್ತಿ ಧಾಮದಲ್ಲಿ ಜರುಗಿತು. ಇದೇ ವೇಳೆ ನಡೆದ ವಿದ್ವಾಂಸರ ಸನ್ಮಾನ ಸಮಾರಂಭದಲ್ಲಿ ಸೂರಿಸಾರಂಗ ಸುವರ್ಣ ಪ್ರಶಸ್ತಿಯನ್ನು ಹುಬ್ಬಳ್ಳಿಯ ವೇದಪೀಠದ ಅಧ್ಯಕ್ಷ ಡಾ. ಕಂಠಪಲ್ಲೀ ಸಮೀರಣಾಚಾರ್ಯ ಅವರಿಗೆ ಶ್ರೀಪಾದಂಗಳವರು ಪ್ರದಾನ ಮಾಡಿದರು.
ಮುಳಬಾಗಿಲು ಶ್ರೀಪಾದರಾಜಮಠಾಧೀಶ ಶ್ರಿಸುಜಯನಿಧಿ ತೀರ್ಥರೂ ಉಪಸ್ಥಿತರಿದ್ದರು.