ತುಮಕೂರು: ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅಧಿಕಾರಿಗಳನ್ನೊಳಗೊಂಡ ಯಾವುದೇ ಸಭೆ ಸಭೆ ಮಾಡಿಲ್ಲ. ರಾಜ್ಯಪಾಲರಿಗಾದರು ದೂರು ಕೊಡಲಿ ಇನ್ಯಾರಿಗಾದರು ಕೊಡಲಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಟಾಂಗ್ ಕೊಟ್ಟರು.
ಪಾವಗಡ ಸೋಲಾರ್ ಪಾರ್ಕ್ ವೀಕ್ಷಣೆ ಬಳಿಕ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿಕೆಶಿ, ನಾನು ಸಿಟಿ ರೌಂಡ್ಸ್‌ನಲ್ಲಿ ಇದ್ದೆ ನನ್ನನ್ನು ಕರೆದುಕೊಂಡು ಹೋಗಲು ಅಧಿಕಾರಿಗಳು ಬಂದಿದ್ದರು ಈ ವೇಳೆ ನಾನು ಸುರ್ಜೇವಾಲ ಇಬ್ಬರು ಕಾಫಿ ಕುಡಿಯಲು ಕುಳಿತು ಕೊಂಡಿದ್ವಿ. ಅದನ್ನು ಬಿಟ್ಟರೆ ಯಾವ ಆಫೀಸರ್‌ಗೂ ಸುರ್ಜೇವಾಲಾಗು ಸಂಬಂಧವಿಲ್ಲ. ನಾವುಂಟು ಸುರ್ಜೇವಾಲ ಉಂಟು, ಹೋಟೆಲ್ ಉಂಟು, ಕಾಫಿ ಉಂಟು. ಯಾರು ಮೀಟಿಂಗ್ ಕರೆದುಲಿಲ್ಲ, ಯಾವ ಮೀಟಿಂಗ್ ಮಾಡಿಲ್ಲ ಎಂದರು.
ರಾಜ್ಯಪಾಲರಿಗೆ ಬೇಕಾದ ದೂರು ಕೊಡಲಿ, ಇನ್ಯಾರಿಗೆ ಬೇಕಾದ ದೂರು ಕೊಡಲಿ. ಇಂತಹ ಸಭೆಗಳನ್ನು ಬಿಜೆಪಿ ಅವರು ಎಷ್ಟು ಮಾಡಿದ್ದಾರೆ ಅನ್ನುವುದು ನಮ್ಮತ್ತಿರ ಪಟ್ಟಿ ಇದೆ. ಪಾಪ ಜಮೀರ್ ಅಹ್ಮದ್ ಫೋಟೋ ಹಾಕಿಕೊಂಡು ಒಂದು ಸಭೆ ಮಾಡಿದ್ದೀನಿ ಅಂತ ಹೇಳಿಕೊಂಡಿದ್ದು ಹಾಗಾಗಿ ಫೋಟೋ ಲೀಕ್ ಆಗಿದೆ ಎಂದು ಸಮರ್ಥಿಸಿಕೊಂಡರು.
ಕಾಂಗ್ರೆಸ್- ಬಿಜೆಪಿ ಹೊಂದಾಣಿಕೆ ರಾಜಕಾರಣ ಕುರಿತ ಸಂಸದ ಪ್ರತಾಪ್ ಸಿಂಹ ಹೇಳಿಕೆ ವಿಚಾರದ ಬಗ್ಗೆ ನಾವು ಅವರ ಆಂತರಿಕ ವಿಚಾರಕ್ಕೆ ಮಧ್ಯಪ್ರವೇಶ ಮಾಡಲ್ಲ. ಅವರು ಏನು ಬೇಕಾದರೂ ಮಾತಾಡಿಕೊಳ್ಳಲಿ. ಅದು ಅವರ ಪಾರ್ಟಿಗೆ ಬಿಟ್ಟಿದ್ದು ಎಂದರು.
ಪರಂ ಬಳಿಯೇ ಕೇಳಿ: ನಾನು ಸಿಎಂ ಆಗೋದನ್ನು ಪಕ್ಷದವರೇ ತಪ್ಪಿಸಿದರು. ನಾನು ಕೆಪಿಸಿಸಿ ಅಧ್ಯಕ್ಷ ಆಗಿದ್ದ ಪಕ್ಷ ಅಧಿಕಾರಕ್ಕೆ ಬಂತು. ನಾನೆಲ್ಲು ಹೇಳಿಕೊಂಡು ತಿರುಗಲಿಲ್ಲ ಎಂಬ ಗೃಹ ಸಚಿವ ಪರಮೇಶ್ವರ ಹೇಳಿಕೆ ವಿಚಾರದ ಪ್ರಶ್ನೆಗೆ ಬಹಳ ಸಂತೋಷ ಅವರ ಅಭಿಪ್ರಾಯ ಏನಿದೆ ಅದನ್ನ ಅವರ ಬಳಿನೇ ಚರ್ಚೆ ಮಾಡಿ ಎಂದು ಶಿವಕುಮಾರ್ ನುಣುಚಿಕೊಂಡರು.