ಜಿಲ್ಲೆ

ಆರ್​ಎಸ್​ಎಸ್​ ಬಗ್ಗೆ ವೇದಿಕೆಯಲ್ಲಿ ಚರ್ಚಿಸೋಣ ಬನ್ನಿ: ವಿ.ಎಸ್​. ಉಗ್ರಪ್ಪಗೆ ಸಿ.ಟಿ.ರವಿ ಆಹ್ವಾನ

mahalakshmihm

ಚಿಕ್ಕಮಗಳೂರು: ಆರ್​ಎಸ್​ಎಸ್​ ಸಾಧನೆ ಬಗ್ಗೆ ಚರ್ಚಿಸೋಣ ಎಂದು ಉತ್ಸುಕರಾಗಿರುವ ಕಾಂಗ್ರೆಸ್​​ನವರೇ ವೇದಿಕೆಯನ್ನು ರೂಪಿಸಲಿ, ಅಲ್ಲೇ ಚರ್ಚೆ ಮಾಡೋಣ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಆಹ್ವಾನ ನೀಡಿದ್ದಾರೆ.

ತನ್ನ ಕೆಲಸವನ್ನು ಹೇಳಿಕೊಳ್ಳುವ ಸ್ವಭಾವ ಸಂಘಕ್ಕಿಲ್ಲ, ಅವರಿಗೆ ಒಂದು ಪುಸ್ತಕ ಕಳುಹಿಸುತ್ತೇನೆ. ಓದಿಕೊಳ್ಳಲಿ ಏನಾದರೂ ಸಂಶಯ ಬಂದರೆ ಚರ್ಚೆಗೆ ಬರಲಿ ಎಂದು ಹೇಳಿದ್ದಾರೆ. 

ಈ ಮಧ್ಯೆ ಚಡ್ಡಿ ಸುಡುವ ವಿಚಾರದಲ್ಲಿ  ಕಾಂಗ್ರೆಸ್​ ನಾಯಕರಿಗೆ ಚಡ್ಡಿ ಕೊರತೆಯಾಗದಂತೆ ನೋಡಿಕೊಳ್ಳಿ, ಎಲ್ಲರೂ ಹಳೆಯ ಚಡ್ಡಿಯನ್ನು ಕಳುಹಿಸಿಕೊಡಲಿ ಎಂದು ರಾಜ್ಯದ ಎಲ್ಲಾ ಕಾರ್ಯಕರ್ತರಿಗೂ ಹೇಳುತ್ತೇನೆ ಎಂದು ಹೇಳಿದ್ದಾರೆ.

ಇನ್ನು ಕಾಂಗ್ರೆಸ್​ ನಾಯಕ ವಿ.ಎಸ್​. ಉಗ್ರಪ್ಪ ಅವರು, ಆರ್​ಎಸ್​ಎಸ್​ ಬಗ್ಗೆ ಚರ್ಚೆ ಮಾಡೋಣ ಎಂಬ ಹೇಳಿಕೆಗೆ ಚಿಕ್ಕಮಗಳೂರಿನಲ್ಲಿ ಸಿ.ಟಿ.ರವಿ ಈ ರೀತಿ ಹೇಳಿಕೆ ನೀಡಿದ್ದಾರೆ. (ದಿಗ್ವಿಜಯ ನ್ಯೂಸ್​)