ಮಂಗಳೂರು: ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಸಮಿತಿ , ಶ್ರೀ ಶಾರದಾ ಸೇವಾ ಟ್ರಸ್ಟ್ ಮತ್ತು ಶ್ರೀ ಶಾರದಾ ಮಾತೃ ಮಂಡಳಿ
ಸುರತ್ಕಲ್ ಇವರು, ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವದ ಸುವರ್ಣ ವರ್ಷಾಚರಣೆಯ ಪ್ರಯುಕ್ತ ನಡೆಯುತ್ತಿರುವ ಸೆಪ್ಟಂಬರ್ ತಿಂಗಳ ಕಾರ್ಯಕ್ರಮವಾಗಿ ಸಾರ್ವಜನಿಕ ಭಜನಾ ಸ್ಪರ್ಧೆ ಜರುಗಿತು.
ಸುರತ್ಕಲ್ ಶಾರದಾ ಮಂದಿರದಲ್ಲಿ ನಡೆದ ಸ್ಪರ್ಧೆಯನ್ನು ಶ್ರೀ ಶಾರದಾ ಸೇವಾ ಟ್ರಸ್ಟ್ ನ ಅಧ್ಯಕ್ಷ ವೈ ರಾಘವೇಂದ್ರ ರಾವ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಸಮಿತಿ ಅಧ್ಯಕ್ಷ ಕೃಷ್ಣ ಶೆಟ್ಟಿ, ಕಾರ್ಯದರ್ಶಿ ಸುರೇಶ್ ಶೆಟ್ಟಿ , ಶ್ರೀ ಶಾರದಾ ಮಾತೃ ಮಂಡಳಿ ಅಧ್ಯಕ್ಷೆ ಅನುರಾಧಾ ರಾಜೀವ್, ಗೌರವಾಧ್ಯಕ್ಷೆ ವೀಣಾ ಟಿ ಶೆಟ್ಟಿ, ಸುನೀತಾ ಶೇಖರ್, ತಾರಾ ಧನುರಾಜ್ ಉಪಸ್ಥಿತರಿದ್ದರು.
ಭಜನಾ ಸ್ಪರ್ಧೆಯ ಸಂಚಾಲಕಿ ವಿದುಷಿ ಸುಮಂಗಲಾ ರತ್ನಾಕರ್ ರಾವ್ ಕಾರ್ಯಕ್ರಮ ನಿರೂಪಿಸಿದರು. 13 ತಂಡಗಳು ಭಾಗವಹಿಸಿದ್ದ ಭಜನಾ ಸ್ಪರ್ಧೆಯಲ್ಲಿ ಸ್ವರಶ್ರೀ ಭಜನಾ ಮಂಡಳಿ ಸುರತ್ಕಲ್ (ಪ್ರಥಮ), ಹಯವದನ ಸಂಗೀತ ಕಲಾ ಶಾಲೆ ಹೊಸಬೆಟ್ಟು (ದ್ವಿತೀಯ), ಆಶ್ರಯ ಮಹಿಳಾ ಮತ್ತು ಯುವ ವೇದಿಕೆ ಕಡಂಬೋಡಿ ಸುರತ್ಕಲ್ (ತೃತೀಯ) ಹಾಗೂ ಶ್ರೀ ದುಗಾರ್ಂಬಾ ಮಹಿಳಾ ಭಜನಾ ಮಂಡಳಿ ತಡಂಬೈಲ್ (ಪ್ರೋತ್ಸಾಹಕ ) ಬಹುಮಾನ ಗಳಿಸಿದರು.
ನರೇಶ್ ಸಸಿಹಿತ್ಲು ಮತ್ತು ರಮೇಶ್ ಕಲ್ಮಾಡಿ ತೀರ್ಪುಗಾರರಾಗಿ ಸಹಕರಿಸಿದ್ದರು.