Gavel on desk. Isolated with good copy space. Dramatic lighting. 
ಜಿಲ್ಲೆ

ಕಾಟಿಪಳ್ಳ ಜಲೀಲ್ ಕೊಲೆ ಆರೋಪಿಗೆ ಜಾಮೀನು

ಮಂಗಳೂರು: ಕಾಟಿಪಳ್ಳದಲ್ಲಿ ಅಬ್ದುಲ್ ಜಲೀಲ್ ಯಾನೆ ಜಲೀಲ್ ಕೊಲೆ ಪ್ರಕರಣದ ಎರಡನೇ ಪ್ರಮುಖ ಆರೋಪಿಗೆ ಹೈಕೋರ್ಟ್ ಷರತ್ತುಬದ್ದ ಜಾಮೀನು ನೀಡಿದೆ.


2022 ಡಿಸೆಂಬರ್ 24ರಂದು ಅನೈತಿಕ ಸಂಬಂಧದ ಶಂಕೆ ಮೇರೆಗೆ ಆರೋಪಿಗಳು ಫ್ಯಾನ್ಸಿ ಅಂಗಡಿಗೆ ರಾತ್ರಿ ಆಗಮಿಸಿ ಮಾರಕಾಯುಧದಿಂದ ಅಬ್ದುಲ್ ಜಲೀಲ್‌ನ್ನು ಕೊಲೆ ಮಾಡಿ ಪರಾರಿಯಾಗಿದ್ದರು. ಗಂಭೀರ ಗಾಯಗೊಂಡ ಅಬ್ದುಲ್ ಜಲೀಲ್ ಮೃತಪಟ್ಟಿದ್ದರು. ಕೃತ್ಯಕ್ಕೆ
ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಸುರತ್ಕಲ್ ಪೊಲೀಸರು ಬಳಿಕ ಬಂಧಿಸಿದ್ದರು. ಶೈಲೇಶ್ ಮೊದಲ ಆರೋಪಿಯಾಗಿದ್ದರೆ, ಸುವಿನ್ ಕಾಂಚನ್ ಎರಡನೇ ಪ್ರಮುಖ ಆರೋಪಿಯಾಗಿದ್ದಾನೆ. ಈ ಪೈಕಿ ಎರಡನೇ ಆರೋಪಿ ಸುವಿನ್ ಕಾಂಚನ್‌ಗೆ ಹೈಕೋರ್ಟ್
ಷರತ್ತುಬದ್ಧ ಜಾಮೀನು ನೀಡಿದೆ. ಆರೋಪಿಗಳ ಪರ ಹಿರಿಯ ವಕೀಲ ಅರುಣ್‌ಶ್ಯಾಮ್ ವಾದಿಸಿದ್ದರು.