ಸುರತ್ಕಲ್ ಇಡ್ಯಾ ಶಿವನಗರ ಬಡಾವಣೆಯಲ್ಲಿ ತೊಂದರೆಯಲ್ಲಿರುವ ಸಾರ್ವಜನಿಕ ಬೃಹತ್ ನೀರಿನ ಕಾಲುವೆಯ ಸ್ಥಳ ಪರಿಶೀಲನೆ ನಡೆಸಿ ಮುಂಬರುವ ಮಳೆಗಾಲಕ್ಕೆ ಮೊದಲು ವ್ಯವಸ್ಥಿತ ತೋಡು/ಕಾಲುವೆ ಒದಗಿಸಿ ಕೊಡಲು ಸೂಕ್ತ ಕ್ರಮ ಕೈಗೊಳ್ಳುವಂತೆ ಇಡ್ಯಾದ ಶ್ರೀ ಶಿವಶಕ್ತಿ ಸೇವಾ ಸಂಘಟನೆ ನಿಯೋಗ ಅಪರ ಜಿಲ್ಲಾಧಿಕಾರಿ ಡಾ.ಜಿ.ಸಂತೋಷ್ ಕುಮಾರ್ ಅವರ ಮೂಲಕ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಿದೆ. ಶ್ರೀ ಶಿವಶಕ್ತಿ ಸೇವಾ ಸಂಘಟನೆ ಅಧ್ಯಕ್ಷ ಪುಂಡಲೀಕ ಹೊಸಬೆಟ್ಟು, ಸ್ಥಳೀಯ ನಿವಾಸಿಗಳಾದ ವಸಂತ ನಾಯಕ್ ಶಿವನಗರ, ಪ್ರೀತಮ್ ಜೈನ್ ಶಿವನಗರ ನಿಯೋಗದಲ್ಲಿದ್ದರು. 
ಜಿಲ್ಲೆ

ಸುರತ್ಕಲ್ ಇಡ್ಯಾ ಶಿವನಗರ ಕಾಲುವೆ ದುರಸ್ತಿ; ಜಿಲ್ಲಾಧಿಕಾರಿಗೆ ಶ್ರೀ ಶಿವಶಕ್ತಿ ಸೇವಾ ಸಂಘಟನೆ ಮನವಿ

Mangaluru - Prakash MC Manjeshwar

ಮಂಗಳೂರು: ಸುರತ್ಕಲ್ ಇಡ್ಯಾ ಶಿವನಗರ ಬಡಾವಣೆಯಲ್ಲಿ ತೊಂದರೆಯಲ್ಲಿರುವ ಸಾರ್ವಜನಿಕ ಬೃಹತ್ ನೀರಿನ ಕಾಲುವೆಯ ಸ್ಥಳ ಪರಿಶೀಲನೆ ನಡೆಸಿ ಮುಂಬರುವ ಮಳೆಗಾಲಕ್ಕೆ ಮೊದಲು ವ್ಯವಸ್ಥಿತ ತೋಡು/ಕಾಲುವೆ ಒದಗಿಸಿ ಕೊಡಲು ಸೂಕ್ತ ಕ್ರಮ ಕೈಗೊಳ್ಳುವಂತೆ ಇಡ್ಯಾದ ಶ್ರೀ ಶಿವಶಕ್ತಿ ಸೇವಾ ಸಂಘಟನೆ ನಿಯೋಗ ಜಿಲ್ಲಾಧಿಕಾರಿಯವರನ್ನು ಒತ್ತಾಯಿಸಿದೆ.

  • ಶ್ರೀ ಶಿವಶಕ್ತಿ ಸೇವಾ ಸಂಘಟನೆ ಅಧ್ಯಕ್ಷ ಪುಂಡಲೀಕ ಹೊಸಬೆಟ್ಟು, ಸ್ಥಳೀಯ ನಿವಾಸಿಗಳಾದ ವಸಂತ ನಾಯಕ್ ಶಿವನಗರ, ಪ್ರೀತಮ್ ಜೈನ್ ಶಿವನಗರ ಅವರ ನಿಯೋಗ ಅಪರ ಜಿಲ್ಲಾಧಿಕಾರಿ ಡಾ.ಜಿ.ಸಂತೋಷ್ ಕುಮಾರ್ ಅವರ ಮೂಲಕ ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಿದೆ.
  • ಡೆಂೆ, ಮಲೇರಿಯಾ ಮತ್ತಿತರ ಸಾಂಕ್ರಾಮಿಕ ರೋಗಗಳ ಬಗ್ಗೆ ಅರಿವು ಮೂಡಿಸಲು ಸುರತ್ಕಲ್ ಪಾ ್ರಥಮಿಕ ಆರೋಗ್ಯ ಕೇಂದ್ರದ ಅಧಿಕಾರಿಗಳು ಶಿವನಗರದಲ್ಲಿನ ಬಡಾವಣೆಗೆ ಭೇಟಿ ನೀಡಿರುವ ಸಂದರ್ಭಬಡಾವಣೆಯಲಿ ್ಲ ಮಳೆನೀರು ಹರಿದು ಹೋಗುವ ಸಾರ್ವಜನಿಕ ಬೃಹತ್ ನೀರಿನ ಕಾಲುವೆಯಲಿ ್ಲ ಕೊಳಚೆ ನೀರು ಸರಾಗವಾಗಿ ಹರಿದು ಹೋಗದೆ ಇರುವುದನ್ನು ಗಮನಿಸಿ ಸಮಸ್ಯೆಯನ್ನು ಪಾಲಿಕೆಯ ಗಮನಕ್ಕೆ ತರುವಂತೆ ಸೂಚಿಸಿದ್ದರು ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
  • ಪರಿಸರದ ಬಹುತೇಕ ಹಿರಿಯರು, ಮಕ್ಕ ು ಕೆಮ್ಮು ಸಹಿತ ವಿವಿಧ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಸಮಸ್ಯೆ ಬಗ್ಗೆ ಶಿವಶಕ್ತಿ ಸೇವಾ ಸಂಘಟನೆ ಮೂಲಕ ಪಾಲಿಕೆಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳದಿರುವ ಹಿನ್ನೆಲೆಯಲ್ಲಿ ಶಾಸಕರು, ಸ್ಥಳೀಯ ಜನಪ್ರತಿನಿಧಿಗಳಿಗೆ ಅಹವಾಲು ಸಲ್ಲಿಸಲಾಗಿದೆ. ಕೊನೆಯ ಪ್ರಯತ್ನವಾಗಿ ದ.ಕನ್ನಡ ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಲಾಗಿದೆ. ಆದರೆ ಇದುವರೆಗೆ ಯಾವುದೇ ಕಾಮಗಾರಿ ಕೈಗೆತ್ತಿಕೊಂಡಿಲ್ಲ. ಮಾತ್ರವಲ್ಲ ಪರಿಸರದ ರೆಸಿಡೆನ್ಸಿ ಫ್ಲಾಟ್‌ನವರೂ ತಮ್ಮ ಪಿಟ್‌ನ ತ್ಯಾಜ್ಯ / ಮಲಿನ ನೀರನ್ನು ಪ್ರಸ್ತಾವಿತ ಕಾಲುವೆಯಲ್ಲಿ ಬಿಡುತ್ತಿದ್ದು, ಸ್ಥಳೀಯರ ಬಾವಿಯ ನೀರೂ ಕುಡಿಯದ ಸ್ಥಿತಿಗೆ ತಲುಪಿದೆ ಎಂದು ಪುಂಡಲೀಕ ಹೊಸಬೆಟ್ಟು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
  • ಈ ಮೊದಲು ಖಾಲಿಯಾಗಿದ್ದ ನಿವೇಶನವನ್ನು ಖರೀದಿಸಿರುವ ಕಾಲುವೆಯ ಆಸುಪಾಸಿನ ಸೈಟ್‌ನವರು ಈಗಾಗಲೇ ಕಾಲುವೆಯನ್ನು ಬಹುತೇಕ ಆಕ್ರಮಿಸಿ ಅಕ್ರಮವಾಗಿ ಆವರಣಗೋಡೆ ನಿರ್ಮಿಸಿದ್ದಾರೆ. ಈ ಕಾಲುವೆಯು ಅಗಲ ಕಿರಿದಾಗಿದ್ದು, ಮಳೆನೀರು ಸರಾಗವಾಗಿ ಹರಿದು ಹೋಗದೆ ಕೊಳಚೆ ನೀರು ನಿಂತು ಭಯಾನಕ ರೋಗರುಜಿನಗಳ ಸೊಳ್ಳೆಗಳ ಉತ್ಪತ್ತಿಸ್ಥಾನವಾಗಿದೆ. ಆದುದರಿಂದ ಜಿಲ್ಲಾಧಿಕಾರಿಯವರು ಸಮಸ್ಯೆ ಬಗ್ಗೆ ಗಮನ ಹರಿಸುವಂತೆ ಸಂಘಟನೆ ಜಿಲ್ಲಾಧಿಕಾರಿಯವರನ್ನು ವಿನಂತಿಸಿದೆ.

ಫೋಟೋ
ಎಂಎನ್‌ಜಿ- ಜನ್ 18- ಸುರತ್ಕಲ್ ಇಡ್ಯಾ