ಜಿಲ್ಲೆ

ಶಾಸಕ ಕೊತ್ತೂರು ಜಿ.ಮಂಜುನಾಥ್​ ವಿರುದ್ಧದ ಪ್ರಕರಣಕ್ಕೆ ಸುಪ್ರೀಂಕೋರ್ಟ್​ ತಡೆ

ಕೋಲಾರ ಡೆಸ್ಕ್

ಕೋಲಾರ; ಕೊತ್ತೂರು ಜಿ.ಮಂಜುನಾಥ್​ ಜಾತಿ ಪ್ರಮಾಣ ಪತ್ರ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್​ ಆದೇಶಕ್ಕೆ ಸುಪ್ರೀಂಕೋಟ್​ ತಡೆಯಾೆ ನೀಡಿದೆ.

ಮುಳಬಾಗಲು ಪೊಲೀಸ್​ ಠಾಣೆಯಲ್ಲಿ ದಾಖಲಾಗಿದ್ದ ಕ್ರಿಮಿನಲ್​ ಪ್ರಕರಣ ತನಿಖೆ ನಡೆಸುವಂತೆ ಕಳೆದ ವರ್ಷ ಹೈಕೋರ್ಟ್​ ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ಪೀಠ ಆದೇಶಿಸಿತ್ತು. ಈ ಸಂಬಂಧ ಕೊತ್ತೂರು ಮಂಜುನಾಥ್​ ಸುಪ್ರಿಂ ಕೋರ್ಟ್​ನಲ್ಲಿ ವಿಶೇಷ ಮೇಲ್ಮನವಿ ಸಲ್ಲಿಸಿದ್ದರು. ನ್ಯಾಯಮೂರ್ತಿಗಳಾದ ಬಿ.ಆರ್​.ಗವಾಯಿ ಹಾಗೂ ಅಗಸ್ಟಿನ್​ ಮಸೈ ಅವರಿದ್ದ ಪೀಠ ಹೈಕೋರ್ಟ್​ ಆದೇಶಕ್ಕೆ ತಡೆಯಾೆ ನೀಡಿದೆ.

ಏನಿದು ಪ್ರಕರಣ..?

ಕಳೆದ 2013ರಲ್ಲಿ ಕೊತ್ತೂರು ಮಂಜುನಾಥ್​ ಮುಳಬಾಗಿಲು ಮೀಸಲು ವಿಧಾನಸಭಾ ೇತ್ರದಿಂದ ಬುಡ್ಗ ಜಂಗಮ ಜಾತಿ ಪ್ರಮಾಣ ಪತ್ರ ನೀಡಿ ಚುನಾವಣೆಗೆ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾಗಿದ್ದರು ಎನ್ನಲಾಗಿತ್ತು. ಕೊತ್ತೂರು ಮಂಜುನಾಥ್​ ಬಡ್ಗ ಜಂಗಮ ಜಾತಿಯವರಲ್ಲ ಎಂದು ಪರಾಜಿತ ಅಭ್ಯರ್ಥಿಗಳಾದ ಮುನಿಆಂಜಿನಪ್ಪ ಹಾಗೂ ಇತರರು ಹೈಕೋರ್ಟ್​ನಲ್ಲಿ ತಕರಾರು ಅರ್ಜಿ ಸಲ್ಲಿಸಿದ್ದರು.