ಜಿಲ್ಲೆ

ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಸುಪ್ರೀತಾ

ಎಸ್.ಎನ್.ರವೀಂದ್ರ

ಮೂಡಿಗೆರೆ: ನೇಪಾಳದಲ್ಲಿ ನಡೆಯುವ ಇಂಡೋ-ನೇಪಾಳ ಚಾಂಪಿಯನ್‌ಶಿಪ್ ಥ್ರೋಬಾಲ್ ಸ್ಪರ್ಧೆಗೆ ಗೋಣಿಬೀಡು ಸಮೀಪದ ಹೊಸಪುರ ಎಸ್.ಸುಪ್ರೀತಾ ಶನಿವಾರ ತೆರಳಿದ್ದಾರೆ.

ಮೈಸೂರಿನ ಮರಿಮಲ್ಲಪ್ಪ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಎಚ್.ಎಸ್.ಸುಪ್ರೀತಾ ಹಿಮಾಚಲ ಪ್ರದೇಶ ನ್ಯಾಷನಲ್ಸ್ ಥ್ರೋಬಾಲ್ ಅಸೋಸಿಯೇಷನ್ ನಡೆಸಿಕೊಟ್ಟ ಜೂನಿಯರ್ ನ್ಯಾಷನಲ್ ಚಾಂಪಿಯನ್‌ಶಿಪ್‌ನಲ್ಲಿ ಸಿಲ್ವರ್ ಮೆಡಲ್ ಗೆದ್ದಿದ್ದರು. ಮಲೇಷಿಯಾದಲ್ಲಿ ಸೆ.16ರಿಂದ ಮೂರು ದಿನ ನಡೆಯುವ ಅಂತಾರಾಷ್ಟ್ರೀಯ ಏಷಿಯನ್ ಥ್ರೋಬಾಲ್ ಚಾಂಪಿಯನ್‌ಶಿಪ್‌ಗೆ ಪಂದ್ಯಕ್ಕೆ ಸುಪ್ರೀತಾ ಸೇರಿದಂತೆ ಭಾರತದ 9 ಕ್ರೀಡಾಪಟುಗಳ ತಂಡ ಪ್ರವಾಸ ಕೈಗೊಳ್ಳಲಿದೆ. ಇವರು ಗೋಣಿಬಿಡು ಸಮೀಪದ ಹೊಸಪುರ ಗ್ರಾಮದ ಶ್ರೀನಿವಾಸ ಮತ್ತು ಗಾಯತ್ರಿ ದಂಪತಿ ಪುತ್ರಿ.