ಜಿಲ್ಲೆ

ಧರ್ಮ ಕಾರ್ಯಕ್ಕೆ ದೈವೀ ಶಕ್ತಿಯ ಬೆಂಬಲ

Avinash R

ಉಪ್ಪಿನಂಗಡಿ: ದೈವೀ ಶಕ್ತಿ ಧರ್ಮ ಕಾರ್ಯಕ್ಕೆ ಬೆಂಬಲ ನೀಡುವುದೇ ವಿನಃ ಅಧರ್ಮಕ್ಕೆ ಬೆಂಬಲ ನೀಡದು. ಸಕಲ ಜೀವ ಜಂತುಗಳಿಗೂ ಒಳಿತನ್ನು ಬಯಸುವ ಮೂಲಕ ಧರ್ಮ ಕಾರ್ಯದತ್ತ ಸಾಗುವ ಹಿಂದು ಧರ್ಮದ ಕಡೆಗೆ ಇಡೀ ವಿಶ್ವವೇ ಸೆಳೆಯಲ್ಪಡಲಿದೆ ಎಂದು ದೈವ ನರ್ತಕ, ಉಜಿರೆ ಎಸ್‌ಡಿಎಂ ತಾಂತ್ರಿಕ ಮಹಾವಿದ್ಯಾಲಯದ ವಿಭಾಗ ಮುಖ್ಯಸ್ಥ ಡಾ.ರವೀಶ್ ಪಡುಮಲೆ ಹೇಳಿದರು.

ಪದಾಳ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಶುಕ್ರವಾರ ನಡೆದ ಧಾರ್ಮಿಕ ಸಭೆಯಲ್ಲಿ ಧಾರ್ಮಿಕ ಉಪನ್ಯಾಸ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ದೇವಾಲಯದ ಜೀರ್ಣೋದ್ಧಾರದಂತಹ ಪುಣ್ಯ ಕಾರ್ಯ ಪ್ರಜೆಗಳಿಂದ ಸಾಧ್ಯವಾಗುತ್ತದೆ. ಪ್ರಕೃತಿಯಲ್ಲಿ, ಕಲಾರಾಧನೆಯಲ್ಲೂ ದೇವರನ್ನು ಕಾಣುವ ಸಂಸ್ಕೃತಿ ನಮ್ಮದು. ಆದ್ದರಿಂದ ಈ ಸಂಸ್ಕೃತಿ- ಸಂಸ್ಕಾರವನ್ನು ಮುಂದಿನ ಪೀಳಿಗೆಗೂ ಉಣಬಡಿಸುವ ಕಾರ್ಯಆಗಬೇಕು ಎಂದರು.

ಮಾಜಿ ಸಂಸದ ಮಾತನಾಡಿದರು. ಬ್ರಹ್ಮಕಲಶೋತ್ಸವ ಸಮಿತಿಯ ಉಪಾಧ್ಯಕ್ಷ ಡಾ.ರಾಜಾರಾಮ ಕೆ.ಬಿ.ಅವರನ್ನು ಸನ್ಮಾನಿಸಲಾಯಿತು. ಅವಿರತ ಸೇವೆ ನೀಡಿದ ವಸಂತ ಕುಂಟಿನಿ ಹಾಗೂ ಹರೀಶ್ವರ ಮೊಗ್ರಾಲ್ ಅವರನ್ನು ಗೌರವಿಸಲಾಯಿತು.

ದೇವಾಲಯ ಆಡಳಿತ ಸಮಿತಿ ಅಧ್ಯಕ್ಷ ಉದಯಶಂಕರ ಭಟ್ಟ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಜಗದೀಶ ರಾವ್ ಮಣಿಕ್ಕಳ, ಉಪಾಧ್ಯಕ್ಷರಾದ ಪ್ರತಾಪ್ ಯು. ಪೆರಿಯಡ್ಕ, ಡಿ.ಚಂದಪ್ಪ ಮೂಲ್ಯ, ಉಷಾಚಂದ್ರ ಮುಳಿಯ, ಪ್ರಧಾನ ಕಾರ್ಯದರ್ಶಿ ಜಯಗೋವಿಂದ ಶರ್ಮಾ ಪದಾಳ, ಜತೆ ಕಾರ್ಯದರ್ಶಿಗಳಾದ ಲಕ್ಷ್ಮಣ ಗೌಡ ನೆಡ್ಚಿಲು, ಸುರೇಶ ಗೌಂಡತ್ತಿಗೆ, ಆಡಳಿತ ಸಮಿತಿ ಉಪಾಧ್ಯಕ್ಷ ಸುರೇಶ ಅತ್ರೆಮಜಲು, ಕಾರ್ಯದರ್ಶಿ ಕೇಶವ ರಂಗಾಜೆ, ಜತೆಕಾರ್ಯದರ್ಶಿ ರಾಮಣ್ಣ ಶೆಟ್ಟಿ ಬೊಳ್ಳಾವು, ಕೋಶಾಧಿಕಾರಿ ರಾಮಚಂದ್ರ ಮಣಿಯಾಣಿ ನೆಡ್ಚಿಲು, ಸದಸ್ಯರಾದ ಶಾಂಭವಿ ರೈ ಪುಳಿತ್ತಡಿ, ಕಂಗ್ವೆ ವಿಶ್ವನಾಥ ಶೆಟ್ಟಿ ಉಪಸ್ಥಿತರಿದ್ದರು.

ಯಕ್ಷ, ದೀಕ್ಷಾ ಪ್ರಾರ್ಥಿಸಿದರು. ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಜಗದೀಶ ರಾವ್ ಮಣಿಕ್ಕಳ ಸ್ವಾಗತಿಸಿದರು. ಸ್ವಾಗತ ಸಮಿತಿ ಸದಸ್ಯ ಆನಂದ ಕುಂಟಿನಿ ವಂದಿಸಿದರು. ಚೇತನ್ ಮೊಗ್ರಾಲ್, ಶ್ರೀಧರ ಭಟ್, ಮಹಾಲಿಂಗೇಶ್ವರ ಭಟ್ ಕಾರ್ಯಕ್ರಮ ನಿರೂಪಿಸಿದರು.

ನಾಗ ಪ್ರತ್ಯಕ್ಷ

ಶ್ರೀ ಸುಬ್ರಹ್ಮಣ್ಯ ದೇವಾಲಯದ ಬ್ರಹ್ಮಕಲಶೋತ್ಸವದ ಎರಡನೇ ದಿನ ದೇವಾಲಯದ ಮುಂಭಾಗದಲ್ಲಿರುವ ರಾಜಬೀದಿಯ ನಾಗನ ಕಟ್ಟೆ ಬಳಿ ನಾಗರಹಾವೊಂದು ಸಂಚರಿಸುತ್ತಿರುವುದು ಕಂಡು ಬಂತು. ಈ ಹಿಂದಿನ ಬ್ರಹ್ಮಕಲಶೋತ್ಸವ ಸಂದರ್ಭದಲ್ಲೂ ದೇವಾಲಯದಲ್ಲಿ ನಾಗರಹಾವು ಪ್ರತ್ಯಕ್ಷವಾಗಿದ್ದು, ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ನಾಗನ ಇರುವಿಕೆ ಗೋಚರಿಸಿದೆ ಎಂಬುದು ಜನರ ನಂಬಿಕೆಯಾಗಿದೆ.