* ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಬಡವರಿಗೆ ಸೂರು
* 15 ಮಂದಿ ಫಲಾನುಭವಿಗಳಿಗೆ ಮನೆ ನಿರ್ಮಾಣ
ವಿಭೂತಿಕೆರೆ ಶಿವಲಿಂಗಯ್ಯ ರಾಮನಗರ
ಸುತ್ತಲೂ ತೆಂಗಿನಗರಿ ಹೊದಿಕೆ, ನೆತ್ತಿ ಮೇಲೆ ಇಣುಕುವ ಸೂರ್ಯ. ಇಂಥ ಇಕ್ಕಟ್ಟಿನ ಜಾಗದಲ್ಲಿ ಕಷ್ಟದ ಜೀವನ ನಡೆಸುತ್ತಿದ್ದ ವೃದ್ಧೆಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಆಶಾ ಕಿರಣವಾಗಿದೆ.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ನಿರ್ಗತಿಕ ಬಡವರನ್ನು ಗುರುತಿಸಿ ವಾತ್ಸಲ್ಯ ಹೆಸರಿನ ಯೋಜನೆಯಲ್ಲಿ ಸೂರೊದಗಿಸುತ್ತಿದೆ. ಅಂತೆಯೇ, ರಾಮನಗರ ತಾಲೂಕಿನ ಜಕ್ಕನಹಳ್ಳಿ ಬೋರಮ್ಮನಿಗೆ ಸಂಸ್ಥೆ ಸಿಮೆಂಟ್ ಸೀಟಿನ ಹೊಸ ಮನೆ ಕಟ್ಟಿಕೊಟ್ಟಿದೆ.
ಬಡತನದಲ್ಲೇ ಒಂಟಿಯಾಗಿ ಜೀವನ ದೂಡುತ್ತಿದ್ದ ಕೈಲಾಂಚ ಹೋಬಳಿಯ ಬನ್ನಿಕುಪ್ಪೆ ಗ್ರಾಪಂನ ಜಕ್ಕನಹಳ್ಳಿಯ ಬೋರಮ್ಮ, ಕೈಲಾಂಚ ಗ್ರಾಪಂನ ನಾಗೋಹಳ್ಳಿ ಜಯಮ್ಮ ಅವರಿಗೆ ಸದ್ದಿಲ್ಲದೆ ಆಶ್ರಯ ಕಲ್ಪಿಸಿಕೊಟ್ಟು ನೆರವಾಗಿರುವ ಸಂಸ್ಥೆ ಜಿಲ್ಲೆಯಲ್ಲಿ ವಾತ್ಸಲ್ಯ ಹೆಸರಿನಲ್ಲಿ 15 ಮಂದಿ ಫಲಾನುಭವಿಗಳಿಗೆ ಮನೆ ನಿರ್ಮಾಣ ಮಾಡಿಕೊಡುತ್ತಿದೆ. ಚನ್ನಪಟ್ಟಣ ಹುಚ್ಚಮ್ಮ, ಚಿಕ್ಕತಿಮ್ಮಮ್ಮ, ಅಲುಮೇಲಮ್ಮ, ಗೌರಮ್ಮ, ಮಾಗಡಿ ಪುಟ್ಟಸ್ವಾಮಯ್ಯ, ಗಂಗಲಕ್ಷ್ಮಮ್ಮ, ಹಾರೋಹಳ್ಳಿ ಕಾಳಮ್ಮ, ಕೆಂಗಲ್ ಯೋಜನಾ ವಲಯ ಪುಟ್ಟಮ್ಮ, ಬೋರಮ್ಮ, ಜಯಮ್ಮ, ಕನಕಪುರ ಚಿನ್ನವೆಂಕಟಮ್ಮ, ಚೌಡಮ್ಮ, ಕುಮಾರನಾಯ್ಕ, ಮಹಾದೇವಿ, ರಾಮನಗರ ನಾಗಮ್ಮ ಅವರಿಗೆ ಹೊಸ ಮನೆ ನೀಡಿದರೆ, ಕನಕಪುರ ಸುನಂದಮ್ಮ, ಗಟ್ಟಮ್ಮ ಅವರ ಮನೆ ದುರಸ್ತಿಗೂ ಸಂಸ್ಥೆ ಸಹಾಯಹಸ್ತ ನೀಡಿದೆ.
ಯೋಜನೆಯಲ್ಲಿ ಫಲಾನುಭವಿಯಾದವರು ಯಾವುದೇ ಆದಾಯ ಮೂಲ ಹೊಂದಿರುವಂತಿಲ್ಲ. ಸ್ವಂತ ನಿವೇಶನ ಇರಬೇಕು. ಜಾಗ ಇಲ್ಲದಿದ್ದರೂ ಸರ್ಕಾರ ಅಥವಾ ದಾನಿಗಳು ಜಾಗ ನೀಡಿದರೆ ಅಲ್ಲಿ ಸಂಸ್ಥೆ ಮನೆ ನಿರ್ಮಿಸಿಕೊಡುತ್ತದೆ. ಸಂಸ್ಥೆಯ ಅಧಿಕಾರಿಗಳು ಮತ್ತು ಸಂಘ, ಒಕ್ಕೂಟಗಳ ಸದಸ್ಯರು ಕಷ್ಟದ ಜೀವನಲ್ಲಿರುವವರನ್ನು ಗುರುತಿಸಿ ಜೀವನ ಪರಿಸ್ಥಿತಿ ಅಳೆದುತೂಗಿ ಯೋಜನೆಯ ವ್ಯಾಪ್ತಿಯಲ್ಲಿ ಸ್ವಂತ ಮನೆ ದೊರಕಿಸಿಕೊಡಲಾಗುತ್ತಿದೆ.
ಮನೆ 1.15 ಲಕ್ಷ ರೂ. ವೆಚ್ಚದ್ದಾಗಿದ್ದು, 10-15 ಅಳತೆಯಲ್ಲಿ ಸಿಮೆಂಟ್ ಸೀಟಿನ ಮನೆಯಾಗಿದ್ದು, ಒಂದು ಹಾಲ್, ಅಡುಗೆ ಮನೆ, ಸ್ನಾನದ ಕೋಣೆ ಒಳಗೊಂಡಿರುತ್ತದೆ.
ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ಜೀವನ ನಿರ್ವಹಣೆಗೆ ಔಷ‘ ಖರ್ಚು ಮುಂತಾದವುಗಳಿಗೆ ಕಷ್ಟ ಪಡುತ್ತಿರುವ ಅಶಕ್ತರು, ಅನಾಥರು, ನಿರ್ಗತಿಕರು, ವಿಶೇಷ ಚೇತನರನ್ನು ಗುರುತಿಸಿ ಅವರ ದಿನನಿತ್ಯದ ಜೀವನ ನಿರ್ವಹಣೆಗಾಗಿ ಪ್ರತಿ ತಿಂಗಳು 1,000 ರೂ. ಮಾಸಾಶನವನ್ನು ಅರ್ಹರ ಮನೆ ಬಾಗಿಲಿಗೆ ನೇರವಾಗಿ ಸಂಸ್ಥೆಯ ಅಧಿಕಾರಿಗಳೇ ನೀಡುತ್ತಿದ್ದಾರೆ.
ಲಕ್ಕೋಜನಹಳ್ಳಿ
ಎಲ್.ಎಂ. ಸಂತೋಷ್
ಇಂದಿಗೂ ಗರಿಶೆಡ್, ಹಳೆ ಮನೆಗಳಲ್ಲಿ ಯೋಗ್ಯವಿಲ್ಲದ ಸ್ಥಳದಲ್ಲಿ ಜೀವನ ಕಟ್ಟಿಕೊಂಡು ಬದುಕು ನಡೆಸುತ್ತಿರುವ ವೃದ್ಧ ಜೀವಗಳಿಗೆ ಹೊಸ ಮನೆ ನಿರ್ಮಿಸಿಕೊಟ್ಟು ಅವರ ಬದುಕಿಗೆ ಸ್ಫೂರ್ತಿ ತುಂಬುತ್ತಿರುವ ‘ರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಕಾರ್ಯ ಸಮಾಜಕ್ಕೆ ಮಾದರಿಯಾಗಿದೆ.
ಜಕ್ಕನಹಳ್ಳಿ.
ಬೋರಮ್ಮ
ಚಿಕ್ಕ ವಯಸ್ಸಿನಲ್ಲಿಯೇ ನನ್ನ ಪತಿ ತೀರಿಹೋದರು. ನನಗೆ ಮಕ್ಕಳಿಲ್ಲ. ನನ್ನ ತಮ್ಮ ಶೆಡ್ ನಿರ್ಮಿಸಿಕೊಟ್ಟಿದ್ದ. ಮಳೆ ಸಿಡಿಲಿನಲ್ಲಿ ಭಯವಾಗುತ್ತಿತ್ತು. ಜತೆಗೆ ಹಾವುಗಳ ಕಾಟ ಬೇರೆ, ಇದರ ಮಧ್ಯೆ ಜೀವನ ಕಟ್ಟಿಕೊಂಡಿದ್ದೆ. ಧರ್ಮಸ್ಥಳ ಸಂಸ್ಥೆ ಮಾಸಾಶನ ಕೊಡುವ ಜತೆಗೆ ಹೊಸ ಮನೆ ನಿರ್ಮಿಸಿಕೊಟ್ಟು ಜೀವನಕ್ಕೆ ಆಧಾರವಾಗಿದೆ.
ಪೂರ್ಣಿಮಾ ಶಿವಮೂರ್ತಿ, ಗ್ರಾಪಂ ಸದಸ್ಯರು, ಜಕ್ಕನಹಳ್ಳಿ
ವಾತ್ಸಲ್ಯ ಯೋಜನೆಯಡಿ ಮನೆ ನಿರ್ಮಾಣ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಡಾ.ವೀರೇಂದ್ರ ಹೆಗ್ಗಡೆ, ಮಾತೃಶ್ರೀ ಹೇಮಾವತಿ ಅಮ್ಮನವರ ಬಹು ದೊಡ್ಡ ಕೊಡುಗೆಯಾಗಿದೆ. ನಿರ್ಗತಿಕ ಬಡವರ ಪಾಲಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ದೇವರಾಗಿದ್ದು, ಸಮಾಜದ ಉನ್ನತಿಗೆ ಇದು ಬಹು ದೊಡ್ಡ ಅಡಿಪಾಯವಾಗಿದೆ.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಸೂರಿಲ್ಲದ ಕಡು ಬಡವರನ್ನು ಗುರುತಿಸಿ ವಾತ್ಸಲ್ಯ ಕಾರ್ಯಕ್ರಮದಡಿ ಜಿಲ್ಲೆಯಲ್ಲಿ 15 ಮಂದಿಗೆ ಮನೆ ನಿರ್ಮಾಣ ಮಾಡಿಕೊಡುತ್ತಿದೆ. ಜತೆಗೆ ಅತ್ಯಂತ ಕಷ್ಟದ ಜೀವನ ನಡೆಸುವ ಕುಟುಂಬಕ್ಕೆ ಮನೆ ರಿಪೇರಿ, ನಿರ್ಗತಿಕರಿಗೆ ಮಾಸಾಶನ ನೀಡುತ್ತಾ ಬರುತ್ತಿದೆ. ಸಂಸ್ಥೆ ಜಿಲ್ಲೆಯಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ.
ಬಿ. ಜಯಕರಶೆಟ್ಟಿ
ಜಿಲ್ಲಾ ನಿರ್ದೇಶಕ, ‘ರ್ಮಸ್ಳ ಗ್ರಾಮಾಭಿವೃದ್ಧಿ ಸಂಸ್ಥೆ, ರಾಮನಗರ