ಪಡುಬಿದ್ರಿ: ಆಂಗ್ಲ ವಾಧ್ಯಮ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಮೂಲಕ ಕನ್ನಡ ವಾಧ್ಯಮ ಶಾಲೆ ಉಳಿಸಲು ಸಾಧ್ಯವಿದೆ. ಶತವಾನೋತ್ತರ ವರ್ಷಗಳಷ್ಟು ಇತಿಹಾಸ ಹೊಂದಿರುವ ಪಣಿಯೂರು ಶಾಲೆಯನ್ನು ಮತ್ತಷ್ಟು ವರ್ಷಗಳವರೆಗೆ ಉಳಿಸುವ ಊರವರ ಪ್ರಯತ್ನಕ್ಕೆ ತನ್ನ ಬೆಂಬಲ ಸದಾ ಇರುತ್ತದೆ ಎಂದು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಭರವಸೆ ನೀಡಿದರು.
ಪಣಿಯೂರು ಶ್ರೀ ದುರ್ಗಾದೇವಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಾನಿಗಳ ನೆರವಿನೊಂದಿಗೆ ನಿರ್ಮಿಸಲಾಗಿರುವ ನೂತನ ಶೌಚಗೃಹವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು.
ಅದಾನಿ ಯುಪಿಸಿಎಲ್ ಜಂಟಿ ಅಧ್ಯಕ್ಷ ಕಿಶೋರ್ ಆಳ್ವ ವಾತನಾಡಿ, ಪಣಿಯೂರು ಶಾಲೆ ಅಭಿವೃದ್ಧಿ, ಆವರಣಗೋಡೆ ರಚನೆಗೂ ಸಿಎಸ್‌ಆರ್ ನಿಧಿಯಡಿ ಅನುದಾನ ದೊರಕಿಸಿಕೊಡಲು ಪ್ರಯತ್ನಿಸುವುದಾಗಿ ತಿಳಿಸಿದರು.
ಬೆಳಪು ಗ್ರಾಮ ಪಂಚಾಯಿತಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಬೆಳಪು ವಾತನಾಡಿದರು. ದಾನಿಗಳನ್ನು ಗೌರವಿಸಲಾಯಿತು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಪ್ರಫುಲ್ಲ ಶೆಟ್ಟಿ ಎಲ್ಲೂರುಗುತ್ತು, ಗುತ್ತಿನಾರ್ ಯೋಗೀಶ್ ಶೆಟ್ಟಿ ಪಣಿಯೂರುಗುತ್ತು, ದಾನಿಗಳಾದ ಸುಕುವಾರ್ ಶೆಟ್ಟಿ ನಡಿಮನೆ, ಉದಯ ಶೆಟ್ಟಿ ಪಡುಮನೆ, ದಿವಾಕರ ಶೆಟ್ಟಿ ಮೇಲ್ಮನೆ, ಧರ್ಮಸ್ಥಳ ಗ್ರಾವಾಭಿವೃದ್ಧಿ ಯೋಜನೆ ಯೋಜನಾಧಿಕಾರಿ ಮಮತಾ ಶೆಟ್ಟಿ, ಉದ್ಯಮಿ ಕರುಣಾಕರ ಶೆಟ್ಟಿ ಪಣಿಯೂರುಗುತ್ತು, ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ಸುರೇಂದ್ರ ಪಣಿಯೂರು, ದಿನೇಶ್ ಶೆಟ್ಟಿ ಕುಂಜೂರು, ಸೀತಾಲಕ್ಷ್ಮೀರಾವ್, ಬೆಳಪು ಸಿಎ ಬ್ಯಾಂಕ್‌ನ ಕಾರ್ಯ ನಿರ್ವಹಣಾಧಿಕಾರಿ ಸುಲೋಚನಾ ದೇವಾಡಿಗ, ಬೆಳಪು ಪಂಚಾಯಿತಿ ಸದಸ್ಯ ಪ್ರಕಾಶ್ ರಾವ್, ಗಣ್ಯರಾದ ಮುಷ್ತಾಕ್ ಸಾಹೇಬ್, ಆನಂದ ಕುಂದರ್ ಎಲ್ಲೂರು, ಜನಾರ್ದನ ಕುಲಾಲ್, ಮಹೇಶ್ ಬೆಳಪು, ಎಸ್‌ಡಿಎಂಸಿ ಅಧ್ಯಕ್ಷ ಭೋಜ ದೇವಾಡಿಗ, ಉಪಾಧ್ಯಕ್ಷೆ ಸುಜಯ, ಪ್ರಭಾರ ಮುಖ್ಯ ಶಿಕ್ಷಕಿ ಸಾವಿತ್ರಿ ಭಾಗವಹಿಸಿದ್ದರು.
ಶಾಲೆ ಸಂಚಾಲಕ ಬಿ.ದೇವರಾಜ ರಾವ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಳೇ ವಿದ್ಯಾರ್ಥಿಗಳಾದ ರಾಕೇಶ್ ಕುಂಜೂರು ಸ್ವಾಗತಿಸಿದರು. ಶಿಕ್ಷಕಿ ಪವಿತ್ರಾ ವಂದಿಸಿದರು. ಸತೀಶ್ ಶೆಟ್ಟಿ ಗುಡ್ಡೆಚ್ಚಿ ನಿರೂಪಿಸಿದರು.