ಜಿಲ್ಲೆ

ಪ್ರತಿಭಾವಂತರಿಗೆ ಸ್ವರ್ಣದಿಂದ ಧನಸಹಾಯ

Dharwada - Basavaraj Idli

ಹುಬ್ಬಳ್ಳಿ: ಇಲ್ಲಿಯ ಕರ್ನಾಟಕ ಜಿಮಖಾನಾ ಅಸೋಸಿಯೇಶನ್ ನಲ್ಲಿ ಹುಬ್ಬಳ್ಳಿ ಸಿಟಿ ರೌಂಡ್ ಟೇಬಲ್ ಹಾಗೂ ಲೇಡಿಸ್ ಸರ್ಕಲ್ ಶಾಖೆಗಳು ಮತ್ತು ವಿವಿಧ ಸಂಟನೆಗಳ ಆಶ್ರಯದಲ್ಲಿ ರಕ್ತದಾನ ಶಿಬಿರ ಹಾಗೂ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಧನಸಹಾಯ ವಿತರಣೆ ಸಮಾರಂಭ ಶನಿವಾರ ನಡೆಯಿತು.

ಸುಮಾರು 50ಕ್ಕೂ ಹೆಚ್ಚು ಯುನಿಟ್ ರಕ್ತ ಸಂಗ್ರಹಿಸಲಾಯಿತು.
ಈ ಸಂದರ್ಭದಲ್ಲಿ ಪ್ರತಿಭಾವಂತರಿಗೆ ಸ್ವರ್ಣ ಗ್ರುಪ್ ಆಫ್ ಕಂಪನಿ ವತಿಯಿಂದ ಶಿಕ್ಷಣಕ್ಕಾಗಿ ಧನಸಹಾಯ ಮಾಡಲಾಯಿತು. ಕಂಪನಿಯ ಎಂಡಿ ಡಾ. ವಿ.ಎಸ್.ವಿ. ಪ್ರಸಾದ ಅವರು ವಿವಿಧ ಶಾಲೆ, ಕಾಲೇಜುಗಳ ವಿದ್ಯಾರ್ಥಿಗಳಿಗೆ ಒಂದು ಲಕ್ಷ ರೂ. ನೆರವು ವಿತರಣೆ ಮಾಡಿದರು.

ಪ್ರತಿಭಾವಂತ ವಿದ್ಯಾರ್ಥಿಗಳ ಶಿಕ್ಷಣ ಮುಂದುವರಿಸಲು ಈ ಹಣಕಾಸಿನ ನೆರವು ಸಹಕಾರಿಯಾಗಲಿ. ಶಿಕ್ಷಣ ಹಾಗೂ ಆರೋಗ್ಯವು ಸದೃಢ ಸಮಾಜದ ಆಧಾರ ಸ್ಥಂಭಗಳಿದ್ದಂತೆ. ಈ ದಿಸೆಯಲ್ಲಿ ಮಕ್ಕಳ ಶಿಕ್ಷಣಕ್ಕೆ ಅನುಕೂಲ ಮಾಡಿಕೊಡಲು ಇದು ನಮಗೆ ಸಿಕ್ಕ ಸದವಕಾಶ ಎಂದು ಡಾ. ಪ್ರಸಾದ ಬಣ್ಣಿಸಿದರು.

ಮಾಜಿ ಮೇಯರ್ ವೀರಣ್ಣ ಸವಡಿ, ಡಾ. ವಿವೇಕ ಪಾಟೀಲ, ಡಾ. ಅಪೂರ್ವ ರಾಂಪುರೆ, ಅರ್ಜುನ ಮಹಾಜನ, ಅಶೋಕ ದೇಸಾಯಿ, ಪ್ರಕಾಶ ಬದ್ದಿ, ಹಿಮಾಂಶು ಕೊಠಾರಿ, ಆದರ್ಶ ಮೆಹರವಾಡೆ, ರಾಹುಲ್ ಕೋಟಿ, ವಿಪುಲ್ ಭೂತಡ, ವಿಜು ಕಾಟವೆ, ಕಿಶನ್ ಹಬೀಬ, ವಿಶ್ವಾಸ ಜೀವಣ್ಣವರ, ಉಷಾ ಕುಬಸದಗೌಡರ, ವೇದಿಕಾ ಮುಳಗುಂದ, ಪೂನಂ, ಭೂಮಿಕಾ, ರೀನಾ ಇತರರು ಇದ್ದರು.