ಜಿಲ್ಲೆಯಲ್ಲಿ ಏಮ್ಸ್ ಸ್ಥಾಪನೆಗೆ ಒತ್ತಾಯಿಸಿ ರಾಯಚೂರಿನ ಜಿಲ್ಲಾ ಕ್ರೀಡಾಂಗಣದಲ್ಲಿ ಏಮ್ಸ್ ಹೋರಾಟ ಸಮಿತಿಯಿಂದ ನಡೆಸಲಾಗುತ್ತಿರುವ ಧರಣಿ ಸ್ಥಳಕ್ಕೆ ಕರವೇ ಅಧ್ಯಕ್ಷ ಶಿವರಾಮೇಗೌಡ ಬುಧವಾರ ಭೇಟಿ ನೀಡಿ ಮಾತನಾಡಿದರು. ಹೋರಾಟ ಸಮಿತಿ ಪ್ರಧಾನ ಸಂಚಾಲಕ ಡಾ.ಬಸವರಾಜ ಕಳಸ, ಕರವೇ ಜಿಲ್ಲಾಧ್ಯಕ್ಷ ಅಶೋಕಕುಮಾರ ಜೈನ್, ಪದಾಕಾರಿಗಳಾದ ಜಾನ್‌ವೆಸ್ಲಿ, ಡಾ.ಎಸ್.ಎಸ್.ಪಾಟೀಲ್, ರಮೇಶ ಕಲ್ಲೂರು, ದೇವೇಂದ್ರಪ್ಪ, ವೆಂಕಯ್ಯ ಶೆಟ್ಟಿ, ಮಲ್ಲನಗೌಡ ಇದ್ದರು. 
ಜಿಲ್ಲೆ

ಏಮ್ಸ್ ಹೋರಾಟಕ್ಕೆ ಕರವೇ ಬೆಂಬಲ

ರಾಚಯ್ಯ ಸ್ವಾಮಿ

ರಾಯಚೂರು: ಜಿಲ್ಲೆಗೆ ಭಾರತೀಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮಂಜೂರು ಮಾಡುವಂತೆ ಒತ್ತಾಯಿಸಿ ಏಮ್ಸ್ ಹೋರಾಟ ಸಮಿತಿಯಿಂದ ಕಳೆದ 615 ದಿನಗಳಿಂದ ನಡೆಸಲಾಗುತ್ತಿರುವ ಧರಣಿ ಸ್ಥಳಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಶಿವರಾಮೇಗೌಡ ಬುಧವಾರ ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಶಿವರಾಮೇಗೌಡ ಮಾತನಾಡಿ, ರಾಜ್ಯಕ್ಕೆ ವಿದ್ಯುತ್, ಚಿನ್ನ, ಭತ್ತ, ಹತ್ತಿ ನೀಡುವ ಇಲ್ಲಿನ ಜನರ ತ್ಯಾಗವನ್ನು ಸರ್ಕಾರಗಳು ಉಡಾೆಯಾಗಿ ಪರಿಗಣಿಸಬಾರದು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಾರತಮ್ಯ ನೀತಿ ಬಿಟ್ಟು ಜಿಲ್ಲೆಗೆ ಏಮ್ಸ್ ಮಂಜೂರು ಮಾಡದೇ ಹೋದರೆ ಅನಾಹುತಕ್ಕೆ ಸರ್ಕಾರವೇ ಹೊಣೆಯಾಗಲಿದೆ.
ಜಿಲ್ಲೆಯ ಜನರು ಆನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಏಮ್ಸ್‌ನಂತಹ ಸಂಸ್ಥೆಗಳು ಮಂಜೂರಾದರೆ ಆರೋಗ್ಯ ಸಮಸ್ಯೆ ನಿವಾರಣೆ ಜತೆಗೆ ಜನರಿಗೆ ಉದ್ಯೋಗವೂ ದೊರೆಯಲಿದೆ. ರಾಜಕೀಯ ಪಕ್ಷಗಳು ಏಮ್ಸ್ ವಿಚಾರದಲ್ಲಿ ರಾಜಕೀಯ ಮಾಡದೆ ಮಂಜೂರಾತಿಗೆ ಸ್ಪಂದನೆ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಹೋರಾಟ ಸಮಿತಿ ಪ್ರಧಾನ ಸಂಚಾಲಕ ಡಾ.ಬಸವರಾಜ ಕಳಸ, ಕರವೇ ಜಿಲ್ಲಾಧ್ಯಕ್ಷ ಅಶೋಕಕುಮಾರ ಜೈನ್, ಪದಾಕಾರಿಗಳಾದ ಜಾನ್‌ವೆಸ್ಲಿ, ಡಾ.ಎಸ್.ಎಸ್.ಪಾಟೀಲ್, ರಮೇಶ ಕಲ್ಲೂರು, ದೇವೇಂದ್ರಪ್ಪ, ವೆಂಕಯ್ಯ ಶೆಟ್ಟಿ, ಮಲ್ಲನಗೌಡ ಉಪಸ್ಥಿತರಿದ್ದರು.