ಭದ್ರಾವತಿಯ ಹೊಸಮನೆಯ ಶಕ್ತಿಕೇಂದ್ರದಲ್ಲಿ ಪಂಡಿತ್ ದೀನ್‌ದಯಾಳ್ ಪುಣ್ಯಸ್ಮರಣೆ ಆಚರಿಸಲಾಯಿತು. ಮಧನಕುಮಾರ್, ಧರ್ಮಪ್ರಸಾದ್, ಆನಂದಕುಮಾರ್, ಕದಿರೇಶ್ ಮಂಜುನಾಥ್, ಶ್ರೀನಾಥ್ ಇತರರಿದ್ದರು. 
ಜಿಲ್ಲೆ

ಬಿಜೆಪಿಯನ್ನು ಮತ್ತೊಮ್ಮೆ ಬೆಂಬಲಿಸಿ

Shivamogga - Desk - Megha MS

ಭದ್ರಾವತಿ: ತಾಲೂಕು ಬಿಜೆಪಿ ಕಾರ್ಯಕರ್ತರು ಭಾನುವಾರ ವಾರ್ಡ್ ವ್ಯಾಪ್ತಿಗಳಲ್ಲಿ ಪಂಡಿತ್ ದೀನ್‌ದಯಾಳ್ ಉಪಾಧ್ಯಾಯರ ಪುಣ್ಯಸ್ಮರಣೆ ಆಚರಿಸಿದರು. ಹೊಸಮನೆಯ ಮಹಾಶಕ್ತಿ ಕೇಂದ್ರದಲ್ಲಿ ಬೂತ್ ಸಂಚಾಲಕ ಮಧನಕುಮಾರ್ ನೇತೃತ್ವದಲ್ಲಿ ಪ್ರಧಾನಿ ನರೇಂದ್ರಮೋದಿ ಹಾಗೂ ಸಂಸದ ಬಿ.ವೈ.ರಾಘವೇಂದ್ರ ಅವರ ಸಾಧನೆಯ ಕರಪತ್ರಗಳನ್ನು ಮನೆಮನೆಗೆ ತೆರಳಿ ವಿತರಿಸಿ ಲೋಕಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಬಿ.ವೈ.ರಾಘವೇಂದ್ರ ಅವರನ್ನು ಬೆಂಬಲಿಸುವAತೆ ಮನವಿ ಮಾಡಿದರು. ಸಾಮಾಜಿಕ ಜಾಲತಾಣದ ಕ್ಯೂ ಆರ್ ಕೋಡ್ ಸ್ಕಾ ್ಯನ್ ಪ್ರತಿಯನ್ನು ಅಂಗಡಿ ಮುಂಗಟ್ಟುಗಳು ಮತ್ತು ಮನೆಗಳ ಗೋಡೆಗಳಿಗೆ ಅಂಟಿಸಿದರು.
ತಾಲೂಕು ಮಂಡಲ ಅಧ್ಯಕ್ಷ ಜಿ.ಧರ್ಮಪ್ರಸಾದ್, ಜಿ.ಆನಂದಕುಮಾರ್, ಕದಿರೇಶ್ ಮಂಜುನಾಥ್, ಬಿ.ಕೆ.ಶ್ರೀನಾಥ್, ರಾಜಶೇಖರ್, ಸೇರಿ ಹಲವು ಕಾರ್ಯಕರ್ತರು ಅವರವರ ವಾರ್ಡ್ ವ್ಯಾಪ್ತಿಯ ಶಕ್ತಿಕೇಂದ್ರಗಳಲ್ಲಿ ಆಚರಣೆೆ ಮಾಡಿದರು.