ತುಂಗಭದ್ರಾ ಎಡದಂಡೆ ನಾಲೆ ಉಪ ಕಾಲುವೆಯ ಕೆಳಭಾಗಕ್ಕೆ ನೀರು ಹರಿಸುವಂತೆ ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘ ಸಿಂಧನೂರಿನಲ್ಲಿ ಶಿರಸ್ತೇದಾರ ಚಂದ್ರಶೇಖರಗೆ ಬುಧವಾರ ಮನವಿ ಸಲ್ಲಿಸಿತು. ಸಂಘಟನೆ ತಾಲೂಕಾಧ್ಯಕ್ಷ ಹೆಚ್.ವಿರುಪಾಕ್ಷಿಗೌಡ ಕಲ್ಲೂರು, ಜಿಲ್ಲಾ ಉಪಾಧ್ಯಕ್ಷ ಬಸವಂತರಾಯಗೌಡ ಕಲ್ಲೂರು ಇದ್ದರು. 
ಜಿಲ್ಲೆ

ಎಡದಂಡೆ ನಾಲೆಯ ಉಪಕಾಲುವೆಗಳಿಗೆ ನೀರು ಪೂರೈಸಿ

ಸಿಂಧನೂರು: ತಾಲೂಕಿನ ಚಿರತನಾಳ ಹಾಗೂ ತುಂಗಭದ್ರಾ ಎಡದಂಡೆ ನಾಲೆಯ ಉಪಕಾಲುವೆಗೆ ಸಮರ್ಪಕ ನೀರು ಹರಿಸುವಂತೆ ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘ ಶಿರಸ್ತೇದಾರ ಚಂದ್ರಶೇಖರಗೆ ಬುಧವಾರ ಮನವಿ ಸಲ್ಲಿಸಿತು.


ತುಂಗಭದ್ರಾ ಎಡದಂಡೆ ನಾಲೆಯ ಉಪಕಾಲುವೆ 46 ರಲ್ಲಿ 26 ದಿನಗಳಿಂದಲೂ ಸಮರ್ಪಕವಾಗಿ ನೀರು ಹರಿಸಿಲ್ಲ. ಮೇಲ್ಭಾಗದಲ್ಲಿ ರೈತರು ನೀರನ್ನು ತಮ್ಮ ಹೊಲಗಳಿಗೆ ಹರಿಸಿಕೊಳ್ಳುತ್ತಿದ್ದು, ಕೆಳಭಾಗಕ್ಕೆ ನೀರು ಬರುತ್ತಿಲ್ಲ. 1100 ಎಕರೆಗೂ ಅಧಿಕ ಜಮೀನಿಗೆ ನೀರಿಲ್ಲವಾಗಿದೆ.

ಕಳೆದ 15 ವರ್ಷಗಳಿಂದಲೂ ಕೆಳ ಭಾಗದ ರೈತರು ಸಮಸ್ಯೆ ಎದುರಿಸುತ್ತಿದ್ದು, ಸಮಸ್ಯೆ ಇತ್ಯರ್ಥಕ್ಕೆ ಅಧಿಕಾರಿಗಳು ನಿರ್ಲಕ್ಷೃವಹಿಸಿದ್ದಾರೆ.

ಕೂಡಲೇ ಉಪಕಾಲುವೆ 46ರಲ್ಲಿ 17 ಪೈಪ್‌ಗಳ ಸೆಟರ್ಸ್‌ ಕೂಡಿಸುವುದು, ಪಕ್ಕದಲ್ಲಿ ಹರಿ ತೆಗೆದು ನೀರು ಬಳಕೆಯನ್ನು ಮುಚ್ಚುವುದು, ಚಿರತನಾಳ ಭೂಮಿಗೆ 2 ಅಡಿ ಗೇಜ್ ನಿರಂತರವಾಗಿ ಕೊಡುವಂತೆ ಒತ್ತಾಯಿಸಿದರು.


ಸಂಘಟನೆ ತಾಲೂಕಾಧ್ಯಕ್ಷ ಹೆಚ್.ವಿರುಪಾಕ್ಷಿಗೌಡ ಕಲ್ಲೂರು, ಜಿಲ್ಲಾ ಉಪಾಧ್ಯಕ್ಷ ಬಸವಂತರಾಯಗೌಡ ಕಲ್ಲೂರು ಇದ್ದರು.