ರಾಯಚೂರಿನ ಜಿಲ್ಲಾಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಕಾರಿ ಚಂದ್ರಶೇಖರ ನಾಯಕ ಅಧ್ಯಕ್ಷತೆಯಲ್ಲಿ ಗುರುವಾರ ಜಿಲ್ಲಾ ಮಟ್ಟದ ಏಕ ಗವಾಕ್ಷಿ ಸಮಿತಿ ಸಭೆ ಜರುಗಿತು. ಜಿ.ಪಂ. ಸಿಇಒ ರಾಹುಲ್ ತುಕಾರಾಮ್ ಪಾಂಡ್ವೆ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಜಂಟಿ ನಿರ್ದೇಶಕ ಮನಿಕ್ ರಘು, ಉಪ ನಿರ್ದೇಶಕ ಬಸವರಾಜ ಯಂಕಂಚಿ, ಸಹಾಯಕ ನಿರ್ದೇಶಕ ಲಕ್ಷ್ಮಿಕಾಂತ ಕುಲಕರ್ಣಿ, ಉದ್ಯಮಿಗಳಾದ ಸಾವಿತ್ರಿ ಪುರುಷೋತ್ತ, ತ್ರಿವಿಕ್ರಮ ಜೋಷಿ, ವಿ.ಲಕ್ಷ್ಮಿರೆಡ್ಡಿ ಇದ್ದರು. 
ಜಿಲ್ಲೆ

ಕೈಗಾರಿಕೆ ಪ್ರದೇಶಕ್ಕೆ ನೀರು ಸರಬರಾಜು ಮಾಡಿ

ರಾಚಯ್ಯ ಸ್ವಾಮಿ

ರಾಯಚೂರು: ರಾಯಚೂರು ಮತ್ತು ದೇವಸುಗೂರು ಕೈಗಾರಿಕೆ ಪ್ರದೇಶಗಳಿಗೆ ನೀರು ಸರಬರಾಜು ಮಾಡಲು ನೀರಿನ ಸಂಪರ್ಕ ಒದಗಿಸಬೇಕು ಹಾಗೂ ರಾಯಚೂರು ಅಭಿವೃದ್ಧಿ ಕೇಂದ್ರದಲ್ಲಿನ ಜಮೀನು ಒತ್ತುವರಿ ಮಾಡಿಕೊಂಡವರಿಗೆ ನೋಟಿಸ್ ನೀಡುವಂತೆ ಜಿಲ್ಲಾಕಾರಿ ಚಂದ್ರಶೇಖರ ನಾಯಕ ಅಕಾರಿಗಳಿಗೆ ಸೂಚಿಸಿದರು.
ಸ್ಥಳೀಯ ಜಿಲ್ಲಾಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕೈಗಾರಿಕೆ ಇಲಾಖೆಯ ಜಿಲ್ಲಾ ಮಟ್ಟದ ಏಕಗವಾಕ್ಷಿ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಈಗಾಗಲೇ ಪೈಪ್‌ಲೈನ್ ಅಳವಡಿಕೆ ಕಾರ್ಯ ಪೂರ್ಣಗೊಂಡಿದ್ದು, ನೀರಿನ ಸಂಪರ್ಕ ಒದಗಿಸುವಂತೆ ತಿಳಿಸಿದರು.
ಕೆಐಎಡಿಬಿಯಿಂದ ನಿರ್ಮಿಸಲಾಗಿರುವ ವಸತಿ ಗೃಹ ಹಾಗೂ ನಿವೇಶನಗಳಿಗೆ ಪೂರ್ಣ ಹಣ ಸಂದಾಯ ಮಾಡಿದವರಿಗೆ ಹಂಚಿಕೆ ಪತ್ರ ನೀಡಬೇಕು. ವಸತಿಗೃಹ ಮತ್ತು ನಿವೇಶನಕ್ಕಾಗಿ 173 ಅರ್ಜಿ ಸ್ವೀಕೃತವಾಗಿದ್ದು, ಇದರಲ್ಲಿ 24 ಅರ್ಜಿದಾರರು ಶೇ.20ರಷ್ಟು, 49 ಜನರು ಶೇ.100ರಷ್ಟು ಹಣ ಭರಿಸಿದ್ದಾರೆ.
ಮೆಗಾ ಟೆಕ್ಸ್‌ಟೈಲ್ ಪಾರ್ಕ್ ಸ್ಥಾಪನೆಗಾಗಿ ಇದುವರೆಗೂ 690 ಎಕರೆ ಜಮೀನು ಸ್ವಾೀನಕ್ಕೆ ನೋಟಿಸ್ ನೀಡಲಾಗಿದ್ದು, ಜೆಎಂಸಿ ಕಾರ್ಯವನ್ನು ಸರ್ವೇ ಇಲಾಖೆಯ ಮೂಲಕ ಬೇಗನೆ ಪ್ರಾರಂಭಿಸಬೇಕು. ಜವಳಿ ಪಾರ್ಕ್‌ಗೆ ಸಾವಿರ ಎಕರೆ ಭೂಮಿ ಸ್ವಾೀನ ಸೇರಿದಂತೆ ವಿದ್ಯುತ್, ನೀರು ಸರಬರಾಜು ಕುರಿತು ತ್ವರಿತವಾಗಿ ಪ್ರಸ್ತಾವನೆ ಕಳುಹಿಸಬೇಕು.
ರೈಸ್ ಕ್ಲಸ್ಟರ್ ಸ್ಥಾಪನೆ ಸರ್ಕಾರದ ಯೋಜನೆಗಳ ಭಾಗವಾಗಿದ್ದು, ಅದಕ್ಕಾಗಿ 15 ರಿಂದ 20 ಎಕರೆ ಜಮೀನು ಹಂಚಿಕೆ ಮಾಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ. 10 ಎಕರೆ ಸ್ಥಳವನ್ನು ಆದಷ್ಟು ಬೇಗ ಹಂಚಿಕೆ ಮಾಡಲು ಪರಿಶೀಲನೆ ನಡೆಸಬೇಕು ಎಂದು ಚಂದ್ರಶೇಖರ ನಾಯಕ ತಿಳಿಸಿದರು.
ಸಭೆಯಲ್ಲಿ ಜಿ.ಪಂ. ಸಿಇಒ ರಾಹುಲ್ ತುಕಾರಾಮ್ ಪಾಂಡ್ವೆ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಜಂಟಿ ನಿರ್ದೇಶಕ ಮನಿಕ್ ರಘು, ಉಪ ನಿರ್ದೇಶಕ ಬಸವರಾಜ ಯಂಕಂಚಿ, ಸಹಾಯಕ ನಿರ್ದೇಶಕ ಲಕ್ಷ್ಮಿಕಾಂತ ಕುಲಕರ್ಣಿ, ಉದ್ಯಮಿಗಳಾದ ಸಾವಿತ್ರಿ ಪುರುಷೋತ್ತ, ತ್ರಿವಿಕ್ರಮ ಜೋಷಿ, ವಿ.ಲಕ್ಷ್ಮಿರೆಡ್ಡಿ ಉಪಸ್ಥಿತರಿದ್ದರು.