ಜಿಲ್ಲೆ

ಗುಣಮಟ್ಟದ ಹಾಲು ಪೂರೈಸಿ

ಲಲಾಟಾಕ್ಷ ಎಸ್

ನಗರ್ಲೆ: ನಂಜನಗೂಡು ತಾಲೂಕು ನಗರ್ಲೆ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ 2023-24 ನೇ ಸಾಲಿನ ವಾರ್ಷಿಕ ಸಭೆ ಸಂಘದ ಆವರಣದಲ್ಲಿ ನಡೆಯಿತು.


ಸಂಘದ ಅಧ್ಯಕ್ಷ ಎನ್.ಬಿ.ವೀರೇಂದ್ರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಂಘದ ಸದಸ್ಯರು ಹೆಚ್ಚು ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡು ಗುಣಮಟ್ಟದ ಹಾಲು ಪೂರೈಕೆ ಮಾಡುವ ಮೂಲಕ ಸಂಘದ ಅಭಿವೃದ್ಧಿಗೆ ಸಹಕಾರ ನೀಡಬೇಕು. ಇದರಿಂದ ಆರ್ಥಿಕ ಪ್ರಗತಿ ಸಾಧಿಸಬಹುದು ಎಂದರು.


ಸಂಘದ ಉಪಾಧ್ಯಕ್ಷೆ ಮಂಜುಳಾ, ನಿರ್ದೇಶಕರಾದ ಎನ್.ಇ.ಗುರುಸ್ವಾಮಿ, ಎನ್.ಎಂ.ರಾಜಶೇಖರಪ್ಪ, ನಾಗೇಗೌಡ, ಎನ್.ಎಂ. ಮಹದೇವಸ್ವಾಮಿ, ಚನ್ನಗೌರಮ್ಮ, ಪಾಪಣ್ಣ, ಜಯಕುಮಾರ್, ಸ್ವಾಮಿ, ನಾಗೇಂದ್ರಸ್ವಾಮಿ, ಸಿಬ್ಬಂದಿ ಎನ್.ಎಂ.ರಾಜೇಂದ್ರ, ಎಚ್.ಮಾದಪ್ಪ, ಸದಸ್ಯರು ಹಾಜರಿದ್ದರು.