ದಡದಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಭೆಯನ್ನು ನಂಜುಂಡಪ್ರಸಾದ್ ಉದ್ಘಾಟಿಸಿದರು. ಗುರುಸ್ವಾಮಿ, ಮಹದೇವಶೆಟ್ಟಿ, ನಿರ್ದೇಶಕರಾದ ಮಾದಪ್ಪ, ಶಿವಮಲ್ಲಪ್ಪ, ಮಹೇಶ್ ಇದ್ದರು. 
ಜಿಲ್ಲೆ

ಗುಣಮಟ್ಟದ ಹಾಲು ಪೂರೈಕೆ ಮಾಡಿ

ಅಭಿನಯ್ ಎಚ್.ಎಂ

ಗುಂಡ್ಲುಪೇಟೆ: ಗುಣಮಟ್ಟದ ಹಾಲು ಉತ್ಪಾದನೆ ಮಾಡುವ ಮೂಲಕ ರೈತರು ಹೆಚ್ಚಿನ ಲಾಭ ಗಳಿಸಬೇಕು ಎಂದು ಚಾಮುಲ್ ನಿರ್ದೇಶಕ ಎಚ್.ಎಸ್.ನಂಜುಂಡಪ್ರಸಾದ್ ಸಲಹೆ ನೀಡಿದರು.

ತಾಲೂಕಿನ ದಡದಹಳ್ಳಿ ಗ್ರಾಮದಲ್ಲಿ ಮಂಗಳವಾರ ಆಯೋಜಿಸಿದ್ದ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಭೆ ಉದ್ಘಾಟಿಸಿ ಮಾತನಾಡಿದರು.

ಅಂತರ್ಜಲ ಸಮಸ್ಯೆಯಿಂದ ಬಹುತೇಕ ರೈತರು ಜೀವನೋಪಾಯಕ್ಕೆ ಹೈನುಗಾರಿಕೆ ಅವಲಂಬಿಸಿದ್ದಾರೆ. ದಿ.ಮಹದೇವಪ್ರಸಾದ್ 2015ರಲ್ಲಿ ಜಿಲ್ಲೆಯಲ್ಲಿ ಹಾಲು ಒಕ್ಕೂಟ ಆರಂಭಿಸಿದ್ದರಿಂದ ಈ ಭಾಗದ ರೈತರಿಗೆ ಹೆಚ್ಚಿನ ಅನುಕೂಲವಾಗಿದೆ. ಪ್ರತಿ ದಿನ 35 ಲೀಟರ್ ಹಾಲು ಸಂಗ್ರಹವಾಗುತ್ತಿದ್ದ ಸಂಘ ಪ್ರಸಕ್ತ ಸಾಲಿನಲ್ಲಿ 4 ಲಕ್ಷ ರೂ.ಲಾಭ ಗಳಿಸಿದ್ದು ಉತ್ಪಾದಕರಿಗೆ ಬೋನಸ್ ವಿತರಿಸಲಿದೆ ಎಂದು ಮೆಚ್ಚುಗೆ ಸೂಚಿಸಿದರು.


ಚಾಮುಲ್ ನಿರ್ದೇಶಕ ಎಂ.ಪಿ.ಸುನಿಲ್, ಸಂಘದ ಅಧ್ಯಕ್ಷ ಗುರುಸ್ವಾಮಿ, ಉಪಾಧ್ಯಕ್ಷ ಮಹದೇವಶೆಟ್ಟಿ, ನಿರ್ದೇಶಕರಾದ ಮಾದಪ್ಪ, ಶಿವಮಲ್ಲಪ್ಪ, ಮಹೇಶ್ ಇತರರು ಇದ್ದರು.