ಹೆಗ್ಗದ್ದೆಯ ಕುಡಿಯುವ ನೀರಿನ ಸಮಸ್ಯೆಯ ಸ್ಥಳಕ್ಕೆ ಜಿಲ್ಲಾಧಿಕಾರಿ ಮೀನಾ ನಾಗರಾಜ್, ಡಾ. ಗೋಪಾಲಕೃಷ್ಣ, ದಲ್ಜಿತ್‌ಕುಮಾರ್, ಸುಜಾತಾ ಭೇಟಿ ನೀಡಿದರು. 
ಜಿಲ್ಲೆ

ಬಾವಿಗೆ ವಿದ್ಯುತ್ ಪೂರೈಸಿ

ಜಯಪುರ: ಮೇಗುಂದಾ ಹೋಬಳಿ ಹೇರೂರು ಹಾಗೂ ಜಯಪುರ ಗ್ರಾಪಂಗಳ ಕೆಲವು ಗ್ರಾಮಗಳಿಗೆ ಮಂಗಳವಾರ ಜಿಲ್ಲಾಧಿಕಾರಿ ಮೀನಾ ನಾಗರಾಜ್, ಜಿಪಂ ಸಿಇಒ ಡಾ. ಗೋಪಾಲಕೃಷ್ಣ, ಎಸಿ ದಲ್ಜಿತ್‌ಕುಮಾರ್, ಕೃಷಿ ಇಲಾಖೆ ಜೆಡಿ ಸುಜಾತಾ ಭೇಟಿ ನೀಡಿ ನೀರಿನ ಅಭಾವ, ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿದರು.

ಹೇರೂರು ಗ್ರಾಪಂ ದೇವಗೋಡು ಗ್ರಾಮದ ತೋಟದಲ್ಲಿ ನಡೆದ ನರೇಗಾ ಯೋಜನೆ ಕಾಮಗಾರಿ ವೀಕ್ಷಿಸಿದರು. ನಂತರ ಜಯಪುರ ಗ್ರಾಪಂ ಕೂಳೂರು ಹಾಗೂ ಹೆಗ್ಗದ್ದೆಯ ಕುಡಿಯುವ ನೀರಿನ ಸಮಸ್ಯೆಯ ಸ್ಥಳಗಳಿಗೆ ಭೇಟಿ ನೀಡಿದರು. ಮಕ್ಕಿಕೊಪ್ಪಕ್ಕೆ ನೀರೊದಗಿಸುವ ಕೂಳೂರಿನ ಬಾವಿಗೆ ಸಮರ್ಪಕ ವಿದ್ಯುತ್ ಸರಬರಾಜು ಮಾಡುವಂತೆ ಕೊಪ್ಪ ವಿಭಾಗದ ಮೆಸ್ಕಾಂ ಎಇಇಗೆ ಡಿಸಿ ಸೂಚಿಸಿದರು. ತಾಪಂ ಇಒ ನವೀನ್‌ಕುಮಾರ್, ಅಕೌಂಟ್ ಆಫೀಸರ್ ಚೇತನ್, ತೋಟಗಾರಿಕೆ ಸಹಾಯಕ ನಿರ್ದೇಶಕ ಅಶೋಕ್ ಇತರ ಅಧಿಕಾರಿಗಳು ಇದ್ದರು.