ಕವಿತಾಳ: ಸಮೀಪದ ಜಂಗರಮರಹಳ್ಳಿಯಲ್ಲಿ ತಾಲೂಕು ಆಡಳಿತದಿಂದ ಹಾಲಪೂರದಲ್ಲಿ ಜನಸ್ಪಂದನ ಕಾರ್ಯ ಕ್ರಮವನ್ನು ಶನಿವಾರ ಹಮ್ಮಿಕೊಳ್ಳಲಾಗಿತ್ತು.
ಇದನ್ನೂ ಓದಿ: ಸರ್ಕಾರಿ ಆಸ್ಪತ್ರೆ ಮೇಲ್ದರ್ಜೆಗೆ : ಹೆಬ್ರಿ ಜನಸ್ಪಂದನ ಸಭೆಯಲ್ಲಿ ಆಗ್ರಹ ; ಸಾರ್ವಜನಿಕರಿಂದ 44 ಅರ್ಜಿ ಸಲ್ಲಿಕೆ
ಶಾಸಕ ಆರ್ ಬಸನಗೌಡ ತುರ್ವಿಹಾಳ ಮಾತನಾಡಿ, ಸರ್ಕಾರ ಜನಪರವಾದ ಕೆಲಸಗಳನ್ನು ಮಾಡುತ್ತಿದೆ. ಚುನಾವಣೆಯಲ್ಲಿ ನೀಡಿದ ಭರವಸೆಯಂತೆ ಪಂಚ ಯೋಜನೆಗಳನ್ನು ಜಾರಿಗೆ ತಂದಿದ್ದು ಅಧಿಕಾರಿಗಳು ನಿರ್ಲಕ್ಷೃ ಮಾಡದೆ ಸಾರ್ವಜನಿಕರ ಅನುಕೂಲಕ್ಕೆ ತಕ್ಕಂತೆ ಕೆಲಸವನ್ನು ಮಾಡಬೇಕು ಎಂದರು.
ಹಾಲಪೂರ, ಜಂಗಮರಳ್ಳಿ ಯದ್ದಲದಿನ್ನಿ ಸೇರಿ ಹೋಬಳಿ ವ್ಯಾಪ್ತಿ ಜನರು ಹಾಲಪೂರಕ್ಕೆ ವಿದ್ಯುತ್ ಘಟಕವನ್ನು ನಿರ್ಮಿಸಬೇಕೆಂದು ಒತ್ತಾಯಿಸಿದರು. ಶಾಸಕರು ಘಟಕಸ್ಥಾಪಿಸುವ ಸಲುವಾಗಿ ಜಾಗೆಯನ್ನು ತೋರಿಸಬೇಕು ಎಂದರು.
ಮುರಾರ್ಜಿ ವಸತಿ ಶಾಲೆಯಲ್ಲಿ ಇರುವ ಗೈರಾಣಿ ಸ್ಥಳ ಬಗ್ಗೆ ಗಮನಕ್ಕೆ ತಂದಾಗ ನೂತನ ನಾಡಕಾರ್ಯಾಲಯ ಕಟ್ಟಡಕ್ಕೆ ಗುರುತಿಸಲಾಗಿದೆ ಎಂದರು. ಶರಣೇಗೌಡ ಜಂಗಮರಹಳ್ಳಿ, ವೆಂಕಟರಡ್ಡಿ ಹಾಲಪೂರ ಮಾತನಾಡಿ,4 ಕಿ.ಮೀ ದೂರದಲ್ಲಿ ನಾಡ ಕಚೇರಿ ಬೇಡ ಅಲ್ಲಿ ವಿದ್ಯುತ್ ಘಟಕ ಸ್ಥಾಪಿಸಿ, ಕರೆಪ್ಪ ತಾತನ ಗುಡಿ ಹತ್ತಿರ ನಾಡ ಕಚೇರಿ ನಿರ್ಮಿಸುವಂತೆ ಒತ್ತಾಯಿಸಿದರು.
ಇದರಿಂದ ಕಂದಾಯ ಇಲಾಖೆಯ ಅಧಿಕಾರಿಗಳು ಸಾರ್ವಜನಿಕರ ಮದ್ಯೆ ವಾಗ್ವಾದ ನಡೆಯಿತು. ಶಾಸಕರು, ಜನರಿಗೆ ಮಾಹಿತಿ ನೀಡದೆ ನಿಮಗೆ ಮನಸ್ಸಿಗೆ ಬಂದಂತೆ ಕಟ್ಟಡಗಳನ್ನು ಕಟ್ಟಿಸಲು ನಿಮಗೆ ಅಧಿಕಾರ ನೀಡಿದವರು ಯಾರು ಎಂದು ತರಾಟೆಗೆ ತೆಗೆದುಕೊಂಡರು.
ಮುರಾರ್ಜಿ ವಸತಿ ಶಾಲೆಯ ಹತ್ತಿರ ವಿದ್ಯುತ್ ಘಟಕ ಮತ್ತು ಗ್ರಾಮದ ದೇವಸ್ಥಾನ ಹತ್ತಿರ ನಾಡಕಾರ್ಯಾಲಯವನ್ನು ಕಟ್ಟಿಸುವ ಬಗ್ಗೆ ತೀರ್ಮಾನಿಸಲಾಗಿದೆ ಎಂದು ಶಾಸಕರು ಸಭೆಗೆ ತಿಳಿಸಿದರು. ರಸ್ತೆ, ಕುಡಿಯುವ ನೀರು, ದೇವಸ್ಥಾನಗಳಿಗೆ ವಿದ್ಯುತ್ ಸಂಪರ್ಕ ಬಗ್ಗೆ ಸಾರ್ವಜನಿಕರು ದೂರು ನೀಡಿದರು.
ನಾಡ ತಹಸೀಲ್ದಾರ್ ಸುನೀಲ್‌ಕುಮಾರ, ಪಿಡಿಒ ರಾಮಣ್ಣ ನಡಗೇರ, ಕಂದಾಯ ನಿರೀಕ್ಷಕ ಅರಳಪ್ಪ, ಗ್ರಾಮ ಲೆಕ್ಕಾಧಿಕಾರಿಗಳಾದ ಕೃಷ್ಣಪ್ಪ, ಬಸವರಾಜ, ಗಂಗಪ್ಪ, ಮೌನೇಶ ಉಪಸ್ಥಿತರಿದ್ದರು.