ಜಿಲ್ಲೆ

ಆಸಕ್ತಿಗನುಗುಣ ಪೂರಕ ಶಿಕ್ಷಣ ಅವಶ್ಯ

Avinash R

ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ

ಪಾಲಕರು ಮಕ್ಕಳಲ್ಲಿರುವ ಅಭಿರುಚಿ, ಆಸಕ್ತಿ ಅರಿತುಕೊಳ್ಳಬೇಕು, ಅದಕ್ಕೆ ಪೂರಕವಾದ ಶಿಕ್ಷಣ ನೀಡಬೇಕು. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಕಾಲದಲ್ಲಿದ್ದು ಸಮಾಜ, ದೇಶದಲ್ಲಿರುವ ಅವಕಾಶ ಅರಿತು ಉತ್ತಮ ಶಿಕ್ಷಣ ಪಡೆಯಬೇಕು. ಪ್ರತಿ ವ್ಯಕ್ತಿ ಶಿಕ್ಷಿತರಾದಾಗ ಬಡತನ ತನ್ನಿಂದ ತಾನೆ ದೂರವಾಗುತ್ತದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಹೇಳಿದರು.

ಬಂಟರ ಸಂಘದ ವತಿಯಿಂದ ಮೂಡುಬಿದಿರೆಯಲ್ಲಿ ವಿದ್ಯಾರ್ಥಿವೇತನ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಬಂಟರ ಸಂಘದ ಅಧ್ಯಕ್ಷ ತಿಮ್ಮಯ್ಯ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಾಧಕರಾದ ಡಾ.ವಿನಯ ಕುಮಾರ್ ಹೆಗ್ಡೆ ಹಾಗೂ ವಸಂತ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು ಹಾಗೂ ಜನಪ್ರತಿನಿಧಿಗಳಾಗಿ ವಿವಿಧ ಜವಾಬ್ದಾರಿ ನಿರ್ವಹಿಸುತ್ತಿರುವವರನ್ನು ಗೌರವಿಸಲಾಯಿತು.

ವಕೀಲ ಶರತ್ ಶೆಟ್ಟಿ, ಮಹಿಳಾ ಘಟಕದ ಗೌರವಾಧ್ಯಕ್ಷೆ ಜಯಶ್ರೀ ಅಮರನಾಥ ಶೆಟ್ಟಿ, ಬಂಟರ ಸಂಘದ ಗೌರವ ಸಲಹೆಗಾರರಾದ ಕಾಂತಿಲತಾ ಶೆಟ್ಟಿ, ಪುರಸಭಾ ಮಾಜಿ ಅಧ್ಯಕ್ಷೆ ರೂಪಾ ಸಂತೋಷ್ ಶೆಟ್ಟಿ, ಕೋಶಾಧಿಕಾರಿ ಎಂ.ಪುರುಷೋತ್ತಮ ಶೆಟ್ಟಿ, ಜತೆ ಕಾರ್ಯದರ್ಶಿಗಳಾದ ಕೆ.ಪಿ.ಸುಚರಿತ ಶೆಟ್ಟಿ, ದಿವಾಕರ ಶೆಟ್ಟಿ, ಪ್ರೇಮನಾಥ ಮಾರ್ಲ, ಜಯಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.

ರಂಜಿತಾ ಶೆಟ್ಟಿ ನಿರೂಪಿಸಿದರು. ಕೆ.ಪಿ.ಸುಚರಿತ ಶೆಟ್ಟಿ ಸ್ವಾಗತಿಸಿದರು. 500ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ 12 ಲಕ್ಷ ರೂ. ವಿದ್ಯಾರ್ಥಿವೇತನ ವಿತರಿಸಲಾಯಿತು.

ಸಂಘವು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರತಿ ವರ್ಷ ವಿದ್ಯಾರ್ಥಿವೇತನ ನೀಡುತ್ತಿದ್ದು, ಇದನ್ನು ಸದುಪಯೋಗ ಪಡಿಸಿಕೊಂಡು ಉನ್ನತ ಶಿಕ್ಷಣ ಪಡೆದು ಬದುಕಿನಲ್ಲಿ ಯಶಸ್ಸು ಗಳಿಸಬೇಕು. - ತಿಮ್ಮಯ್ಯ ಶೆಟ್ಟಿ, ಅಧ್ಯಕ್ಷರು, ಬಂಟರ ಸಂಘ ಮೂಡುಬಿದಿರೆ https://www.vijayavani.net/garbage-in-gurupura-ulaibettu https://www.vijayavani.net/knowledge-of-science-and-technology-brings-new-vitality