ಜಿಲ್ಲೆ

ಮನೋವಿಕಾಸಕ್ಕೆ ಪೂರಕ

Davangere - Desk - Mahesh Babu E

ಹೊಳಲ್ಕೆರೆ: ಕ್ರೀಡಾ ಚಟುವಟಿಕೆಗಳು ಮನೋವಿಕಾಸಕ್ಕೆ ಪೂರಕವಾಗಿವೆ ಎಂದು ಚಳ್ಳಕೆರೆ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ ಪ್ರಾಧ್ಯಾಪಕ ಡಾ.ತಿಪ್ಪೇಸ್ವಾಮಿ ತಿಳಿಸಿದರು.

ಕ್ರೀಡಾ ಹಾಗೂ ಶಿಕ್ಷಕರ ದಿನದ ಅಂಗವಾಗಿ ಮಲ್ಲಾಡಿಹಳ್ಳಿ ಅನಾಥಸೇವಾಶ್ರಮದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಿರಂತರ ಓದು ಜತೆಗೆ ಕ್ರೀಡೆ ಇತರ ಪಠ್ಯೇತರ ಚಟುವಟಿಕೆಗಳಲಿ ಪಾಲ್ಗೊಂಡರೆ ಜ್ಞಾನ ವೃದ್ಧಿಗೆ ಸಹಕಾರಿ ಆಗಲಿದೆ. ಈ ನಿಟ್ಟಿನಲ್ಲಿ ಪಾಲಕರು ವಾಸ್ತವ ಸತ್ಯ ಅರಿತು ಮಕ್ಕಳ ಆಸಕ್ತಿ ಗುರುತಿಸಿ ಪ್ರೋತ್ಸಾಹಿಸಬೇಕು ಎಂದರು.

ರಾಘವೇಂದ್ರ ಬಿ.ಇಡಿ ಕಾಲೇಜಿನ ಹಿರಿಯ ಉಪನ್ಯಾಸಕ ಪ್ರೊ.ಎನ್.ಧನಂಜಯ ಮಾತನಾಡಿ, ದೈಹಿಕ ಶಿಕ್ಷಣ ಶಿಕ್ಷಕ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದರೆ, ಆತನ ಶಾಲೆ ಮಕ್ಕಳು ಹೆಚ್ಚು ಅಂಕ ಗಳಿಕೆ ಜತೆಗೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಾರೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಪ್ರೊ.ಜೆ.ರಘುನಾಥ್, ಪ್ರೊ.ವೇಣುಗೋಪಾಲ್, ಶಿಕ್ಷಣಾರ್ಥಿಗಳಾದ ರಕ್ಷಿತಾ, ಸಂತೋಷ್, ರಾಜೇಶ್ವರಿ ಮಾತನಾಡಿದರು.

ಉಪನ್ಯಾಸಕರಾದ ಡಾ.ಗಿರೀಶ್, ಸಂತೋಷ್ ಕುಮಾರ್, ಬಿ.ಎಂ.ಸುನೀಲ್ ಕುಮಾರ್, ಎಸ್.ವಿ.ಮಂಜುನಾಥ್, ಗ್ರಂಥಪಾಲಕ ಪಿ.ವಿ.ಬಸವರಾಜ್ ಉಪಸ್ಥಿತರಿದ್ದರು.