ಸುಂಟಿಕೊಪ್ಪ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಲಕಾವೇರಿ ಜ್ಞಾನ ವಿಕಾಸ ಹಾಗೂ ಕಾನ್ ಬೈಲ್ ಜನನಿ ಸ್ವಸಹಾಯ ಸಂಘದ ವತಿಯಿಂದ ಸದಸ್ಯರಿಗೆ ಹಿಡುವಳಿ ಯೋಜನೆ, ಸಂಪೂರ್ಣ ಸುರಕ್ಷಾ ಆರ್‌ಬಿಐ ವಿಚಾರದ ಬಗ್ಗೆ ಮಾಹಿತಿ ಕಾರ್ಯಾಗಾರವನ್ನು ನಡೆಸಲಾಯಿತು. ಭಾನುವಾರದಂದು ಕಾನ್‌ಬೈಲ್ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಕಾರ್ಯಾಗಾರವನ್ನು ಸೇವಾ ಪ್ರತಿನಿಧಿ ಯಶೋದಾ ಉದ್ಘಾಟಿಸಿ ಮಾತನಾಡಿ, ಹಿಡುವಳಿ ಯೋಜನೆಯನ್ನು ಕಾಲ ಕಾಲಕ್ಕೆ ಸದಸ್ಯರು ಸರಿಯಾಗಿ ಬಳಗಿಸಿಕೊಂಡು ತಮ್ಮ ಅಭ್ಯುದಯವನ್ನು ತಾವೇ ಕಂಡುಕೊಳ್ಳಬಹುದಾಗಿದೆ. ಇದರಿಂದ ವೈಯಕ್ತಿಕ ಕುಟುಂಬದ ಬೆಳವಣಿಗೆಗೆ ಸಹಕಾರಿಯಾಗಲಿದೆ. ಬಡವರಿಗಾಗಿ ಸಂಪೂರ್ಣ ಸುರಕ್ಷಾ ಯೋಜನೆ ಇದೆ. ಇದರಿಂದ ನೀವು ನಿಮ್ಮ ಕುಟುಂಬದ ಸದಸ್ಯರು ಯಾವುದೇ ರೀತಿಯ ಅನಾರೋಗ್ಯಗಳಿಗೆ ತುತ್ತಾದಲ್ಲಿ ನಿರ್ಭೀತಿಯಿಂದ ಯಾರೊಂದಿಗೂ ಸಹಾಯ ಹಸ್ತಕ್ಕೆ ಬಯಸದೆ ನೀವು ಚಿಕಿತ್ಸೆ ಪಡೆದು ಗುಣಮುಖರಾಗಲು ಸಹಕಾರಿಯಾಗಲಿದೆ. ಪ್ರತಿಯೊಬ್ಬ ಸದಸ್ಯರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಹಣಕಾಸು ಹೂಡಿಕೆ ಮತ್ತು ಸಾಲಗಳನ್ನು ಪಡೆಯುವಾಗ ಆರ್‌ಬಿಐ ನಿಯಮಗಳ ಕುರಿತು ಮಾಹಿತಿಯನ್ನು ಸಂಘದ ಸದಸ್ಯರಿಗೆ ನೀಡಿದರು.
ಮಾಹಿತಿ ಕಾರ್ಯಗಾರದಲ್ಲಿ ಜನನಿ, ಭೂಮಿಕಾ, ಶ್ರೀನಿಧಿ, ಕನ್ನಿಕಾ, ಭಗವತಿ ಹಾಗೂ ಧೃತಿ ಸ್ವ ಸಹಾಯ ಸಂಘದ ಸದಸ್ಯರು ಪಾಲ್ಗೊಂಡಿದರು.