ಪೀಣ್ಯ ದಾಸರಹಳ್ಳಿ: ವಿದ್ಯಾರ್ಥಿಗಳಿಗೆ ಸಂತೆಯ ವಾತಾವರಣ ಕಲ್ಪಿಸಿ, ವ್ಯವಹಾರ ಜ್ಞಾನ ತಿಳಿಸಿಕೊಡುವ ಉದ್ದೇಶದಿಂದ ಪೀಣ್ಯ 2ನೇ ಹಂತದಲ್ಲಿರುವ ಸನ್ರೈಸ್ ಪಬ್ಲಿಕ್ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ 'ಚಿಣ್ಣರ ಸಂತೆ' ಗಮನಸೆಳೆದಿದೆ. ವಿದ್ಯಾರ್ಥಿಗಳು ಸ್ವ-ಆಸಕ್ತಿಂದ ವಹಿವಾಟು ನಡೆಸಿದರು. ಪಾಲಕರು, ಶಿಕ್ಷಕರು ಸಂತೆಯಲ್ಲಿ ಪಾಲ್ಗೊಂಡು ವಿವಿಧ ವಸ್ತುಗಳನ್ನು ಖರೀದಿಸಿ ಪ್ರೋತ್ಸಾಹಿಸಿದರು.
'ಚಿಣ್ಣರ ಸಂತೆ' ಉದ್ಘಾಟಿಸಿ ಮಾತನಾಡಿದ ಬ್ಲೂಮೂನ್ ಶಾಲೆಯ ಕಾರ್ಯದರ್ಶಿ ಸಿ.ಎನ್.ಚಂದ್ರಶೇಖರ್, ಆನ್ಲೈನ್ ಶಾಪಿಂಗ್ನಲ್ಲಿ ಇಂದಿನ ವಿದ್ಯಾರ್ಥಿಗಳು ಹೆಚ್ಚಾಗಿ ತೊಡಗಿಸಿಕೊಂಡಿದ್ದು, ಭೌತಿಕವಾಗಿ ನಡೆಯುವ ವ್ಯಾಪಾರ ಬಗ್ಗೆ ಜ್ಞಾನ ಕಡಿಮೆಯಾಗುತ್ತಿದೆ. ಶಾಲೆಯಲ್ಲಿ ಇಂತಹ ಪ್ರಾಯೋಗಿಕ ಕಾರ್ಯಕ್ರಮಗಳಿಂದ ಮಕ್ಕಳಿಗೆ ವ್ಯಾಪಾರ&ವಹಿವಾಟ ಪ್ರಕ್ರಿಯೆಯನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಇಂತಹ ಚಟುವಟಿಕೆಗಳು ಹೆಚ್ಚಬೇಕೆಂದು ಆಶಿಸಿದರು.
ಸನ್ರೈಸ್ ಪಬ್ಲಿಕ್ ಶಾಲೆಯ ಕಾರ್ಯದರ್ಶಿ ಡಾ.ಮಹೇಶ್, ಪ್ರಾಂಶುಪಾಲೆ ವಿ.ಧನಲಕ್ಷ್ಮೀ ಇನ್ನಿತರರಿದ್ದರು.