ಜಿಲ್ಲೆ

ಜಾನಪದ ರಂಗಭೂಮಿಗೆ ಆಧಾರವಾಗಿದ್ದರು ಸುಂಕಾಪುರ

ವಿಜಯವಾಣಿ ಸುದ್ದಿಜಾಲ ಧಾರವಾಡ

ಡಾ. ಎಂ.ಎಸ್​. ಸುಂಕಾಪುರ ಸಾಹಿತ್ಯದಲ್ಲಿ ನವರಸಗಳ ಜೀವಂತಿಕೆ ಇದೆ. ಜಾನಪದ ರಂಗಭೂಮಿಗೆ ಅವರು ಆಧಾರ ಸ್ತಂಭವಾಗಿದ್ದರು ಎಂದು ಹಿರಿಯ ಸಾಹಿತಿ ಡಾ. ರುದ್ರಣ್ಣ ಚಿಲುಮಿ ಹೇಳಿದರು.

ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ಇತ್ತೀಚೆಗೆ ಆಯೋಜಿಸಿದ್ದ ಡಾ. ಎಂ. ಎಸ್​. ಸುಂಕಾಪುರ ದತ್ತಿ ನಿಮಿತ್ತ ಉಪನ್ಯಾಸ ಕಾರ್ಯಕ್ರಮದಲ್ಲಿ ಡಾ. ಎಂ.ಎಸ್​. ಸುಂಕಾಪುರ ಜೀವನ ಸಾಧನೆ ಕುರಿತು ಉಪನ್ಯಾಸ ನೀಡಿದರು.

ಡಾ. ಎಂ. ಎಸ್​. ಸುಂಕಾಪುರ ಕನ್ನಡ ಸಾಹಿತ್ಯ ಲೋಕದ ಹಾಸ್ಯ ಪ್ರಕಾರದ ಸಾಹಿತಿಗಳಲ್ಲೊಬ್ಬರು. ಪ್ರಾಧ್ಯಾಪಕರಾದ ಅವರು ಕಠಿಣ ವಿಷಯಗಳನ್ನು ಹಾಸ್ಯಭರಿತವಾಗಿ ಹೇಳುವ ಕಲೆ ಕರಗತ ಮಾಡಿಕೊಂಡಿದ್ದರು. ಸಮಾಜವನ್ನು ಹಾಸ್ಯದ ಮೂಲಕವೇ ತಿದ್ದುವ, ಜಾಗೃತಗೊಳಿಸುವ ಶಕ್ತಿ ಇತ್ತು ಎಂದರು.

ನಿವೃತ್ತ ಇಂಜಿನಿಯರ್​ ಎಫ್​.ಐ. ಚನ್ನಪ್ಪಗೌಡರ ಅಧ್ಯಕ್ಷತೆ ವಹಿಸಿದ್ದರು. ದತ್ತಿದಾನಿ ಜಯಶ್ರೀ ಚನ್ನಪ್ಪಗೌಡರ, ಶ್ರೀನಿವಾಸ ವಾಡಪ್ಪಿ, ಕೆ.ಎಂ. ಅಂಗಡಿ, ವಿ.ಬಿ. ಸಂತೋಜಿ, ಸಿ.ಎಂ. ಕುಂದಗೋಳ, ಪುಷ್ಪಾ ಪಾಟೀಲ, ಮಧುಮತಿ ಸಣಕಲ್​, ಎಂ.ಎಸ್​. ನರೇಗಲ್​, ಇತರರು ಇದ್ದರು.

ವೀರಣ್ಣ ಒಡ್ಡೀನ ಸ್ವಾಗತಿಸಿದರು. ಸತೀಶ ತುರಮರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಂಕರ ಕುಂಬಿ ವಂದಿಸಿದರು.