ಜಿಲ್ಲೆ

ವಿಳಾಸ ಹುಡುಕಿ ಪರ್ಸ್ ಹಿಂದಿರುಗಿಸಿದ ಸುನೀಲ

ಅಂಕೋಲಾ: ರಸ್ತೆಯಲ್ಲಿ ಸಿಕ್ಕದ ಪರ್ಸ್ ಅನ್ನು ವಾರಸುದಾರರಿಗೆ ತಲುಪಿಸಿ ಮಾನವೀಯತೆ ಮೆರೆದ ಘಟನೆ ಗುರುವಾರ ನಡೆದಿದೆ.
ಕೇಣಿ ಗ್ರಾಮದ ಸುನೀಲ ಗಣಪತಿ ಬಂಟ ಎಂಬುವರು ಬೈಕ್‌ನಲ್ಲಿ ಪಟ್ಟಣದ ಪಿ.ಎಂ. ಹೈಸ್ಕೂಲ್ ರಸ್ತೆಯಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಅವರಿಗೆ ಪರ್ಸ್ ಸಿಕ್ಕಿದೆ.

ಪರ್ಸ್‌ನೊಳಗಿದ್ದ ಬ್ಯಾಂಕ್‌ನ ರಸೀದಿಯ ಆಧಾರದ ಮೇರೆಗೆ ಬ್ಯಾಂಕ್ ಅಧಿಕಾರಿಯಿಂದ ವಿಳಾಸ ಮತ್ತು ಮೊಬೈಲ್ ನಂಬರ್ ಪಡೆದು ಮಾಲೀಕರಿಗೆ ಹಸ್ತಾಂತರಿಸಿದರು.
ಬಾಸಗೋಡಿನ ರಾಧಾ ಅಜಿತ ಆಗೇರ ಅವರ ಪರ್ಸ್ ಆಗಿದ್ದು, ಪಿಎಸ್‌ಐ ಗೀತಾ ಶಿರಸಿಕರ ನೇತೃತ್ವದಲ್ಲಿ ರಾಧ ಆಗೇರ ಅವರನ್ನು ಠಾಣೆಗೆ ಕರೆಯಿಸಿ ಕಳೆದುಕೊಂಡ ಪರ್ಸ್ ಅನ್ನು ಹಿಂದಿರುಗಿಸಲಾಯಿತು.


ಪರ್ಸ್‌ನಲ್ಲಿ ಮಂಗಳಸೂತ್ರ ಮತ್ತು ಇತರ ದಾಖಲೆ ಪತ್ರಗಳು ಇದ್ದವು.