ಮುಂಡರಗಿ: ತಾಲೂಕಿನ ಬಾಗೇವಾಡಿ ಗ್ರಾಮದಲ್ಲಿ ಕೃಷಿ ಇಲಾಖೆಯ 2024-25ನೇ ಸಾಲಿನ ರಾಷ್ಟ್ರೀಯ ಖಾದ್ಯ ತೈಲ ಅಭಿಯಾನ-ಎಣ್ಣೆಕಾಳು ಬೆಳೆ ಯೋಜನೆಯಡಿ ಸೋಮವಾರ ಶಾಸಕ ಡಾ.ಚಂದ್ರು ಲಮಾಣಿ ಅವರು ಕೆಲ ರೈತರಿಗೆ ಸೂರ್ಯಕಾಂತಿ ಬೀಜ ವಿತರಿಸಿದರು.
2024-25ನೇ ಸಾಲಿನ ಮುಂಗಾರು ಹಂಗಾಮಿನ ರೈತರ ಬೆಳೆ ಸಮೀಕ್ಷೆಗೆ ಮತ್ತು ಮಣ್ಣು ಮಾದರಿ ಸಂಗ್ರಹಣೆಗೆ ಇದೇ ವೇಳೆ ಚಾಲನೆ ನೀಡಲಾಯಿತು. ರೈತರ ಜಮೀನಿನಲ್ಲಿ ಸೈಕಲ್ ವೀಡರ್ ಮೂಲಕ ಹೆಡೆ ಹೊಡೆದು ಹಾಗೂ ಸೂರ್ಯಕಾಂತಿ ಬಿತ್ತನೆ ವೇಳೆ ಟ್ರ್ಯಾಕ್ಟರ್ ಚಲಾಯಿಸಿ ಗಮನ ಸೆಳೆದರು.
ಬಾಗೇವಾಡಿ ಗ್ರಾ.ಪಂ. ಅಧ್ಯಕ್ಷ ಮಲ್ಲಿಕಾರ್ಜುನ ಹಣಜಿ, ಮಲ್ಲಪ್ಪ ತಳವಾರ, ಯಶೋಧಾ ಪಾಟೀಲ, ಪ್ರಕಾಶ ಕೊಡ್ಲಿ, ರಾಮಣ್ಣ ವಡ್ಡರ, ಹೇಮಗಿರೀಶ ಹಾವಿನಾಳ, ಕುಮಾರಸ್ವಾಮಿ ಹಿರೇಮಠ, ಮಂಜುನಾಥಗೌಡ ಪಾಟೀಲ, ಈರಣ್ಣ ಇಟಗಿ, ಚನ್ನಪ್ಪ ಗೋವಿನಕೊಪ್ಪ, ಸಿದ್ದಪ್ಪ ತಳವಾರ, ಪರಮೇಶ್ವರಪ್ಪ ಮಾಚೇನಹಳ್ಳಿ, ಈರಣ್ಣ ತಳವಾರ, ತಿಪ್ಪವ್ವ ತಳವಾರ, ರೇಣವ್ವ ಇಟಗಿ, ತಾಲೂಕು ಸಹಾಯಕ ಕೃಷಿ ನಿರ್ದೇಶಕ ಪ್ರಮೋದ ತುಂಬಳ, ಜಿಲ್ಲಾ ಸಹಾಯಕ ಕೃಷಿ ನಿರ್ದೇಶಕ (ಜಾಗೃತದಳ) ರಾಘವೇಂದ್ರ, ವೀರೇಶ ಸೊಪ್ಪಿನ, ಗೌರಿಶಂಕರ ಸಜ್ಜನರ ಇತರರು ಇದ್ದರು.