ಜಿಲ್ಲೆ

ಕಾರಟಗಿಯಿಂದ ನಿಜಾಮಬಾದ್‌ಗೆ ಭತ್ತ ಕಟಾವು ಯಂತ್ರ ಸಾಗಿಸುತ್ತಿದ್ದ ಲಾರಿ ಸ್ಟೇರಿಂಗ್ ತುಂಡಾಗಿ ಪಲ್ಟಿ, ಸ್ಥಳದಲ್ಲೇ ಇಬ್ಬರ ದುರ್ಮರಣ

Raichur

ಸಿರವಾರ: ತಾಲೂಕಿನ ಕಲ್ಲೂರು ಹೊರವಲಯದಲ್ಲಿ ಸೋಮವಾರ ಸ್ಟೇರಿಂಗ್ ತುಂಡಾಗಿ ಲಾರಿ ಪಲ್ಟಿ ಆಗಿದ್ದರಿಂದ ಡ್ರೈವರ್ ಸೇರಿ ಇಬ್ಬರು ಸಾವಿಗೀಡಾಗಿದ್ದಾರೆ.

ಕಾರಟಗಿಯಿಂದ ನಿಜಾಮಬಾದ್‌ಗೆ ಭತ್ತ ಕಟಾವು ಯಂತ್ರ ಸಾಗಿಸುತ್ತಿದ್ದ ಲಾರಿಯು ಕಲ್ಲೂರು ಹೊರವಲಯದಲ್ಲಿ ಸ್ಟೇರಿಂಗ್ ಕಟ್ ಆಗಿ ಉರುಳಿದೆ. ಲಾರಿಯಲ್ಲಿದ್ದ 5 ಜನರಲ್ಲಿ ಡ್ರೈವರ್ ಸುರೇಶ (36) ಹಾಗೂ ಮರಿಯಾ (25) ಎಂಬುವವರು ಸ್ಥಳದಲ್ಲಿ ಮೃತಪಟ್ಟಿದ್ದಾರೆ.

ಇನ್ನುಳಿದವರಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ. ಆಸ್ಪತ್ರೆ ದಾಖಲು ಮಾಡಲಾಗಿದೆ. ರಸ್ತೆ ಪಕ್ಕದಲ್ಲಿ ಲಾರಿ ಬಿದ್ದಿರುವುದರಿಂದ ಕೆಲ ಹೊತ್ತು ಟ್ರಾಫಿಕ್ ಜಾಮ್ ಉಂಟಾಗಿತ್ತು. ಸ್ಥಳಕ್ಕೆ ಸಿಪಿಐ ದತ್ತಾತ್ತೇಯ ಕಾರ್ನಾಡ್, ಪಿಎಎಸ್‌ಐ ಸುಜಾತ ನಾಯಕ ಭೇಟಿ ನೀಡಿ ಪರಿಶೀಲಿಸಿದರು. ಸಿರವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.