ಜಿಲ್ಲೆ

ಸುಂದರನಗರದಲ್ಲಿ ಅದ್ದೂರಿ ಗಣೇಶೋತ್ಸವ

ಸುನಿಲ್ ಪೊನ್ನೇಟಿ

ಕುಶಾಲನಗರ:

ಕೂಡುಮಂಗಳೂರು ಗ್ರಾ.ಪಂ. ವ್ಯಾಪ್ತಿಯ ಸುಂದರನಗರದಲ್ಲಿ ವಿನಾಯಕ ಯುವಕರ ಸಂಘದ ವತಿಯಿಂದ 31ನೇ ವರ್ಷದ ಗಣೇಶೋತ್ಸವ ಬುಧವಾರ ಆಚರಿಸಲಾಯಿತು. ಬೆಳಗ್ಗಿನ ಜಾವದಿಂದಲೇ ಪೂಜಾ ವಿದಿವಿಧಾನಗಳನ್ನು ನೆರವೇರಿಸಿ ಗಣೇಶನನ್ನು ಪ್ರತಿಷ್ಠಾಪಿಸಲಾಯಿತು.

ಗಣಪತಿ ಮಂಟಪವನ್ನು ವಿದ್ಯುತ್ ಅಲಂಕೃತಗಳಿAದ ಸಿಂಗರಿಸಲಾಯಿತು. ಮೂರು ದಿನಗಳ ಕಾಲ ವಿನಾಯಕನಿಗೆ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಿದ್ದು, ನಂತರ ಮೆರವಣಿಗೆ ಮೂಲಕ ಸಾಗಿ ಗಣೇಶನನ್ನು ವಿಸರ್ಜಿಸಲಾಗುವುದು. ಭಕ್ತಾಧಿಕಾರಿಗಳಿಗೆ ಅನ್ನದಾನವನ್ನೂ ಏರ್ಪಡಿಸಲಾಗಿದೆ ಎಂದು ವಿನಾಯಕ ಯುವಕರ ಸಂಘದ ಪ್ರತಿನಿಧಿಗಳು ತಿಳಿಸಿದ್ದಾರೆ.

ಪ್ರತಿ ವರ್ಷ ಶಾಮಿಯಾನ ಹಾಕಿ ಗಣೇಶನನ್ನು ಪ್ರತಿಷ್ಠಾಪಿಸಲಾಗುತ್ತಿತ್ತು. ಈ ಬಾರಿ ಗಣಪತಿ ಪ್ರತಿಷ್ಠಾಪನೆಗೆ ಶಾಶ್ವತವಾದ ಕಟ್ಟಡ ನಿರ್ಮಿಸಬೇಕು ಎಂಬ ಉದ್ದೇಶದಿಂದ ಶೆಡ್ ನಿರ್ಮಿಸಲಾಗಿದೆ. ಎಲ್ಲರ ಸಹಕಾರದೊಂದಿಗೆ ಮುಂದಿನ ದಿನಗಳಲ್ಲಿ ಇನ್ನಷ್ಟು ಕಟ್ಟಡವನ್ನು ಅಭಿವೃದ್ಧಿಪಡಿಸುವ ಕೆಲಸಕ್ಕೆ ಸಂಘ ಮುಂದಾಗಲಿದೆ. ಗಣಪತಿ ಸೇವಾ ಸಮಿತಿ, ಬಣ್ಣಾರಮ್ಮಾ ಸೇವಾ ಸಮಿತಿ, ಹನುಮ ಸೇವಾ ಸಮಿತಿ, ಅಯ್ಯಪ್ಪಸ್ವಾಮಿ ಸೇವಾ ಸಮಿತಿ ಗ್ರಾ.ಪಂ ಸದಸ್ಯರಾದ ಆಶಾ ವೆಂಕಟೇಶ್, ದೀಪಾ ಹಾಗೂ ಕೆ.ಬಿ. ಶಂಶುದ್ಧೀನ್, ಗ್ರಾಮಸ್ಥರು ಹಾಗೂ ದಾನಿಗಳ ಸಹಕಾರದಿಂದ ಇದು ಸಾಧ್ಯವಾಗಿದೆ ಎಂದಿದ್ದಾರೆ.

ಗಣಪತಿ ಸೇವಾ ಸಮಿತಿ, ಬಣ್ಣಾರಮ್ಮಾ ಸೇವಾ ಸಮಿತಿ, ಹನುಮ ಸೇವಾ ಸಮಿತಿ, ಅಯ್ಯಪ್ಪಸ್ವಾಮಿ ಸೇವಾ ಸಮಿತಿ ಪದಾಧಿಕಾರಿಗಳು, ಗ್ರಾ.ಪಂ ಸದಸ್ಯ ಕೆ.ಬಿ.ಶಂಶುದ್ಧೀನ್ ಹಾಗೂ ಗ್ರಾಮಸ್ಥರು ಇದ್ದರು.