ಜಿಲ್ಲೆ

ಸಾಲ‌ ಮರಳಿಸು ಅಂದ ಅಳಿಯನನ್ನು ಭೀಕರವಾಗಿ ಕೊಲೆ ಮಾಡಿದ ಸಹೋದರ ಮಾವ !

ವಿಜಯವಾಣಿ ಸುದ್ದಿಜಾಲ ಕೆಂಭಾವಿ

ಕೊಟ್ಟ ಸಾಲ ವಾಪಸ್ ಕೊಡುವಂತೆ ಕೇಳಿದ ಅಳಿಯನನ್ನು, ಆತನ ಸಹೋದರ ಮಾವನಿಂದಲೇ ಕೊಲೆಯಾದ ಘಟನೆ

ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಶಾಖಾಪುರ(ಎಸ್.ಕೆ) ಗ್ರಾಮದಲ್ಲಿ ನಡೆದಿದೆ.

ಲಕ್ಷ್ಮಣ ಚಿಗರಿಹಾಳ (25) ಹತ್ಯೆಗೀಡಾದ ದುರ್ದೈವಿ

ಆತನ ಸೋದರ ಮಾವ ಮಾನಪ್ಪ ಎಂಬಾತನಿಂದ ಬರ್ಬರ ಕೊಲೆ ನಡೆದಿದೆ.

ನಿನ್ನೆ ತಡರಾತ್ರಿ ಲಕ್ಚ್ಮಣ ಬರ್ಹಿದೆಸೆಗೆ ಹೋಗುತ್ತಿದ್ದಾಗ,ಆತನ ಮೇಲೆ ದಾಳಿ ಮಾಡಿ ಕೊಡಲಿಯಿಂದ‌ ಹೊಡೆದು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಶಿದ್ದಾರೆ.

ಸ್ಥಳಕ್ಕೆ ಎಸ್ಪಿ ಪೃಥ್ವಿಕ್ ಶಂಕರ್, ಡಿವೈಎಸ್ಪಿ ಜಾವೀದ್ ಇನಾಮದಾರ್ ಪಿಎಸಐ ಅಮೋಜ್ ಕಾಂಬಳೆ ಭೇಟಿ, ಪರಿಶೀಲನೆ ಮಾಡಿದರು. ಆರೋಪಿ ಮಾನಪ್ಪನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಙಙ