ವಿಜಯಪುರದ ಗಾಂಧಿ ಭವನದಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ಬೇಸಿಗೆ ಶಿಬಿರ ಸಮಾರೋಪ ಸಮಾರಂಭವನ್ನು ಜಿ.ಪಂ. ಸಿಇಒ ರಿಷಿ ಆನಂದ ಉದ್ಘಾಟಿಸಿದರು. ದೀಪಾ ಕಾಳೆ, ದೀಪಾ ಜಾನಕಿ ಮತ್ತಿತರರಿದ್ದಾರೆ. 
ಜಿಲ್ಲೆ

ಮಕ್ಕಳ ಕಲಿಕೆಗೆ ಬೇಸಿಗೆ ಶಿಬಿರ ಸಹಕಾರಿ

ಗಿರೀಶ ಸಗರ

ವಿಜಯಪುರ: ಮಕ್ಕಳ ಜ್ಞಾನ ಮತ್ತು ಸರ್ವಾಂಗೀಣ ವ್ಯಕ್ತಿತ್ವ ವಿಕಸನಕ್ಕೆ ಬೇಸಿಗೆ ಶಿಬಿರಗಳು ಸಹಕಾರಿಯಾಗಿವೆ ಎಂದು ಜಿಲ್ಲಾ ಬಾಲಭವನ ಅಧ್ಯಕ್ಷ, ಜಿ.ಪಂ. ಸಿಇಒ ರಿಷಿ ಆನಂದ ಹೇಳಿದರು.

ನಗರದ ಜಿಪಂ ರಸ್ತೆಯಲ್ಲಿನ ಗಾಂಧಿಭವನದಲ್ಲಿ ಜಿಲ್ಲಾ ಬಾಲಭವನ ಸಮಿತಿ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮಕ್ಕಳ ಬೇಸಿಗೆ ಶಿಬಿರ ಸಮಾರೋಪ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಈ ಬಾರಿಯ ಬೇಸಿಗೆ ಶಿಬಿರ ಬಹಳ ತೃಪ್ತಿದಾಯಕವಾಗಿ ನಡೆಯಿತು. ಅತ್ಯಲ್ಪ ಸಮಯದಲ್ಲಿಯೇ ಶಿಬಿರದಲ್ಲಿ ಭಾಗವಹಿಸಿದ ಮಕ್ಕಳು ಕರಾಟೆ, ನೃತ್ಯ, ಸಂಗೀತ, ಚಿತ್ರಕಲೆ, ಕರಕುಶಲ ವಸ್ತುಗಳ ತಯಾರಿಕೆ ಸೇರಿ ಅಗತ್ಯ ಕೌಶಲಗಳ ಬಗ್ಗೆ ತಿಳಿದುಕೊಂಡಿದ್ದಾರೆ. ನಾಲ್ಕು ಗೋಡೆಗಳ ಮಧ್ಯೆ ಸದಾ ಪುಸ್ತಕ, ಓದು&ಬರಹ ಒತ್ತಡದಿಂದ ಮುಕ್ತರಾಗಿ ಮಕ್ಕಳು ತಮ್ಮ ಸ್ನೇಹಿತರೊಂದಿಗೆ ಆಟವಾಡಿಕೊಂಡು ಕಲಿಯಲು ಬೇಸಿಗೆ ಶಿಬಿರ ಸಹಕಾರಿಯಾಗಿದೆೆ ಎಂದರು.

ಬೇಸಿಗೆ ಶಿಬಿರಗಳು ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಅನಾವರಣಕ್ಕೆ ವೇದಿಕೆಯಾಗಿವೆ. ಅಲ್ಲದೆ, ಮಕ್ಕಳ ಮನಸ್ಸು ಹೂವಿನಂತೆ ಅರಳಲು ನೆರವಾಗಲಿದೆ. ಶಿಬಿರದಲ್ಲಿ ಮಕ್ಕಳಿಗೆ ಸಂಪನ್ಮೂಲ ವ್ಯಕ್ತಿಗಳು ನೀಡಿದ ಸಲಹೆಗಳು ಅವರಲ್ಲಿ ಕಲಿಕೆಯತ್ತ ಆಸಕ್ತಿ ವಹಿಸುವ ಜತೆಗೆ ಸೃಜನಾತ್ಮಕ ಕಲೆ ರೂಢಿಸಿಕೊಳ್ಳಲು ಸಹಾಯವಾಗುತ್ತವೆ ಎಂದು ತಿಳಿಸಿದರು.

ಮುಂಬರುವ ದಿನಗಳಲ್ಲಿ ಬಾಲಭವನದ ಹೊರಾಂಗಣ ಆವರಣ ನವೀಕರಣಗೊಳಿಸಿ ಮಕ್ಕಳ ಸ್ನೇಹಿ ಉದ್ಯಾನವನ್ನಾಗಿ ಮಾಡಲಾಗುವುದು. ಈ ಶಿಬಿರವನ್ನು ಬೇಸಿಗೆಗೆ ಮಾತ್ರ ಸೀಮಿತಗೊಳಿಸದೆ ವರ್ಷಡೀ ಮಕ್ಕಳ ಸರ್ವತೋಮುಖ ವ್ಯಕ್ತಿತ್ವದ ಬೆಳವಣಿಗೆಗಾಗಿ ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲು ಮುಂದಾಗಬೇಕು.ಪಾಠದ ಜತೆಗೆ ಆಟ ಎಂಬುದರೆಡೆಗೆ ಪಾಲಕರು ಒತ್ತು ನೀಡಬೇಕು.

ಮಕ್ಕಳು ಹೊಂದಿರುವ ಅವರ ಆಸಕ್ತಿ ೇತ್ರ ಮತ್ತು ವಿವಿಧ ಚಟುವಟಿಕೆಯಲ್ಲಿಯೂ ಭಾಗವಹಿಸುವಂತೆ ಪ್ರೋತ್ಸಾಹ ನೀಡಿ ಅವರಲ್ಲಿನ ಸೃಜನಾತ್ಮಕ ಪ್ರತಿಭೆ ಅನಾವರಣಕ್ಕೆ ಒತ್ತು ನೀಡಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಬಾಲಭವನದ ಕಾರ್ಯದರ್ಶಿ ಕೆ.ಕೆ. ಚವ್ಹಾಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ದೀಪಾ ಕಾಳೆ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ದೀಪಾ ಜಾನಕಿ, ಗ್ರಾಮೀಣ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅನೀಲ ಹಳ್ಳಿ, ಜಿಲ್ಲಾ ಮಕ್ಕಳ ರಕ್ಷಣಾ ಟಕ ಸಂಪನ್ಮೂಲ ವ್ಯಕ್ತಿಗಳಾದ ಭಾರತಿ ಕುಂದನಗಾರ, ಸವಿತಾ ಬಿರಾದಾರ, ಜಗದೀಶ ಗುಳೇದಗುಡ್ಡ, ವಾಸು ಕುಲಕರ್ಣಿ, ಸುಮೀತ ಅಕ್ಕಿ ಮತ್ತಿತರರಿದ್ದರು.