ಜಿಲ್ಲೆ

ಕ್ರಿಕೆಟ್ ಪ್ರಿಯರಿಗೆ ಬೇಸಿಗೆ ಶಿಬಿರ,  ಶ್ರೀ ದುರ್ಗಾ ಸ್ಪೋರ್ಟ್ಸ್ ಅಕಾಡೆಮಿಯಿಂದ ಆಯೋಜನೆ

Dharwada - Basavaraj Idli

ಹುಬ್ಬಳ್ಳಿ: ಇಲ್ಲಿಯ ವಿದ್ಯಾನಗರ ಹೊಸ ಕೋರ್ಟ್ ಬಳಿಯ ಕಲ್ಲೂರ ಲೇಔಟ್ ನಲ್ಲಿರುವ ಶ್ರೀ ದುರ್ಗಾ ಸ್ಪೋರ್ಟ್ಸ್ ಅಕಾಡೆಮಿ ವತಿಯಿಂದ ಕ್ರಿಕೆಟ್ ಬೇಸಿಗೆ ಶಿಬಿರ (ಸಮ್ಮರ್ ಕ್ಯಾಂಪ್) ಆಯೋಜಿಸಲಾಗಿದೆ.

ಅಕಾಡೆಮಿಯಿಂದ ಬೇಸಿಗೆ ಶಿಬಿರಕ್ಕಾಗಿಯೇ ವಿಶೇಷ ಕ್ರಿಕೆಟ್ ಪಠ್ಯಕ್ರಮ ರಚನೆ ಮಾಡಲಾಗಿದ್ದು, ಅದರಂತೆ ತರಬೇತಿ ನಡೆಯಲಿದೆ. ಆರು ವರ್ಷ ಮೇಲ್ಪಟ್ಟವರು ಶಿಬಿರದಲ್ಲಿ ಪಾಲ್ಗೊಳ್ಳಬಹುದು.

ರಜೆಯಲ್ಲಿ ಕ್ರೀಡಾಪಟುಗಳಿಗೆ ತಿಂಗಳು, ಎರಡು ತಿಂಗಳು ಹಾಗೂ 45 ದಿನಗಳ ಕಾಲ ತರಬೇತಿ ನೀಡಲಾಗುತ್ತದೆ. ಬೆಳಗ್ಗೆ 6ರಿಂದಲೇ ಬ್ಯಾಚ್ ಗಳು ಆರಂಭವಾಗುತ್ತದೆ. ಅಭ್ಯರ್ಥಿಗಳಿಗೆ ಅನುಕೂಲಕರ ಸಮಯದಲ್ಲಿ ತರಬೇತಿಗೆ ಹಾಜರಾಗಬಹುದು.

ಇಲ್ಲಿ ಅತ್ಯಂತ ವಿಶಾಲ ಮೈದಾನವಿದ್ದು, ಅನುಭವಿ ಕೋಚ್ ಗಳು ತರಬೇತಿ ನೀಡಲಿದ್ದಾರೆ. ಬ್ಯಾಟಿಂಗ್, ಫಿಲ್ಡಿಂಗ್, ವಿಕೇಟ್ ಕೀಪಿಂಗ್ ಸೇರಿ ಕ್ರಿಕೆಟ್‌ನ ಪ್ರತಿಯೊಂದು ವಿಭಾಗದಲ್ಲಿ ಸೂಕ್ಷ್ಮ ತರಬೇತಿ ಸಿಗಲಿದೆ.

ಟರ್ಫ ವಿಕೆಟ್ಸ್, ಬಾಲಿಂಗ್ ಮಷಿನ್, ಹಗಲು ಹಾಗೂ ರಾತ್ರಿ ಪ್ರಾಕ್ಟೀಸ್ ಗೆ ಇಂಡೋರ್ ಹಾಗೂ ಫ್ಲಡ್ ಲೈಟ್ಸ್, ಪರಿಣಿತ ಹಾಗೂ ಅನುಭವಿ ತರಬೇತಿದಾರರು, ಸೆಲೆಬ್ರಿಟಿ ಕೋಚ್ ಗಳಿಂದ ವಿಶೇಷ ತರಬೇತಿ, ಅಗತ್ಯ ಇರುವವರಿಗೆ ವಸತಿ ಸೌಲಭ್ಯ, ವಿಡಿಯೋ ನೋಡಿ ವೈಯಕ್ತಿಕ ಪ್ರದರ್ಶನದ ವಿಶ್ಲೇಷಣೆ, ಅಭ್ಯರ್ಥಿಗಳ ಪ್ರಗತಿ ಪರಿಶೀಲನೆ, ತರಬೇತಿ ನಂತರ ವಿವಿಧ ಪಂದ್ಯಾವಳಿಗಳಲ್ಲಿ ಆಡಲು ಅವಕಾಶ, ಹೀಗೆ ಹಲವು ಸೌಲಭ್ಯಗಳನ್ನು ಶಿಬಿರಾರ್ಥಿಗಳಿಗೆ ಕಲ್ಪಿಸಲಾಗಿದೆ.

ಟೀಮ್ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ ಅವರ ಕ್ರಿಕ್ ಕಿಂಗ್‌ಡಂನ ಪ್ರಾಂಚೈಸಿಯಾಗಿರುವ ಶ್ರೀ ದುರ್ಗಾ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ತರಬೇತಿ ಪಡೆದವರಿಗೆ ಅವರ ಹಸ್ತಾಕ್ಷರ ಇರುವ ಪ್ರಮಾಣ ಪತ್ರ ನೀಡಲಾಗುತ್ತದೆ. ಅಕಾಡೆಮಿಯಲ್ಲಿ ಪ್ರವೇಶ ಪಡೆದ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ಉಚಿತವಾಗಿ ಯುನಿಫಾರ್ಮ ನೀಡಲಾಗುತ್ತದೆ.

ಉತ್ತಮ ಆರೋಗ್ಯ ಕಾಪಾಡಿಕೊಳ್ಳುವ ದಿಸೆಯಲ್ಲಿ ಮಕ್ಕಳಿಗೆ ಜಿಮ್ ವ್ಯವಸ್ಥೆ ಮಾಡಲಾಗಿದೆ.
ಒಟ್ಟಾರೆ, ಬೇಸಿಗೆ ರಜೆಯಲ್ಲಿ ಉತ್ತಮ ಕ್ರೀಡಾಪಟುವಾಗಿ ಹೊರಹೊಮ್ಮಲು ಬೇಕಾದ ಎಲ್ಲ ಸವಲತ್ತುಗಳು ಇಲ್ಲಿದ್ದು, ಆಸಕ್ತರು ಇದರ ಪ್ರಯೋಜನ ಪಡೆಯಬೇಕೆಂದು ಅಕಾಡೆಮಿಯ ಪ್ರಕಟಣೆ ಕೋರಿದೆ.