ಜಿಲ್ಲೆ

ಬೇಸಿಗೆ ಶಿಬಿರದಿಂದ ಮಕ್ಕಳ ಜ್ಞಾನ ವೃದ್ಧಿ

ಇಂದಿರಾ ಎನ್ ಕೆ

ಕೋಟ: ಮಕ್ಕಳ ಮನೋವಿಕಾಸಕ್ಕೆ ಬೇಸಿಗೆ ಶಿಬಿರಗಳು ಸಹಕಾರಿಯಾಗುತ್ತದೆ. ಈ ಹಿನ್ನೆಲೆ ಸ್ಥಳೀಯ ಮಕ್ಕಳು ಇದರ ಪ್ರಯೋಜನವನ್ನು ಅಗತ್ಯವಾಗಿ ಪಡೆದುಕೊಳ್ಳಬೇಕು ಎಂದು ಪಾಂಡೇಶ್ವರ ಗ್ರಾಮ ಪಂಚಾಯಿತಿ ಸದಸ್ಯ ಚಂದ್ರಮೋಹನ್ ಪೂಜಾರಿ ಅಭಿಪ್ರಾಯಪಟ್ಟರು.

ಗುರುವಾರ ಪಾಂಡೇಶ್ವರ ಗ್ರಾಮ ಪಂಚಾಯಿತಿ ಹಾಗೂ ಅರಿವು ಕೇಂದ್ರ ಡಿಜಿಟಲ್ ಗ್ರಂಥಾಲಯ ಮತ್ತು ವಾಹಿತಿ ಕೇಂದ್ರ ಇವರುಗಳ ಸಹಭಾಗಿತ್ವದಲ್ಲಿ ಮೇ15ರಿಂದ 21ರವರೆಗೆ ನಡೆಯಲಿರುವ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರದಲ್ಲಿ ವಾತನಾಡಿದರು.

ಪಾಂಡೇಶ್ವರ ಗ್ರಾ.ಪಂ ಅಧ್ಯಕ್ಷೆ ಸುಶೀಲ ಸದಾನಂದ ಪೂಜಾರಿ ಉದ್ಘಾಟಿಸಿದರು. ಅರ್ಪಿತಾ ಬ್ರಹ್ಮಾವರ, ಪಂಚಾಯಿತಿ ಉಪಾಧ್ಯಕ್ಷ ವೈ.ಬಿ.ರಾವೇಂದ್ರ, ಅಭಿವೃದ್ಧಿ ಅಧಿಕಾರಿ ಲೋಲಾಕ್ಷಿ, ಸದಸ್ಯರಾದ ಸಿಲ್ವಸ್ಟಾರ್ ಡಿಸೋಜ, ಸಂಧ್ಯಾ ರಾವ್, ಸಂಜೀವಿನಿ ಒಕ್ಕೂಟದ ಎಂಬಿಕೆ ಉಷಾ ಗಣೇಶ್ ಪೂಜಾರಿ, ವಿಆರ್‌ಡಬ್ಲೂೃ ಶಾಂತಿ ಉಪಸ್ಥಿತರಿದ್ದರು. ಗ್ರಂಥಪಾಲಕಿ ಜ್ಯೋತಿ ಪೂಜಾರಿ ಕಾರ್ಯಕ್ರಮ ಸ್ವಾಗತಿಸಿ ನಿರೂಪಿಸಿ ವಂದಿಸಿದರು.