Oplus_131072 
ಜಿಲ್ಲೆ

ಬೇಸಿಗೆ ಶಿಬಿರ ಸಮಾರೋಪ ಸಮಾರಂಭ ಇಂದು

ವಿಜಯವಾಣಿ ಸುದ್ದಿಜಾಲ ಧಾರವಾಡ
ಕಲಾಶಕ್ತಿ ಪ್ರತಿಷ್ಠಾನ ಹಾಗೂ ಪಂ. ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನ ವತಿಯಿಂದ ಏರ್ಪಡಿಸಿದ್ದ ಕಲಾ ಲೋಕದಲ್ಲಿ ಒಂದು ಪುಟ್ಟ ಹೆಜ್ಜೆ ಎಂಬ ಮಕ್ಕಳ ಬೇಸಿಗೆ ಶಿಬಿರ ಸಮಾರೋಪ ಸಮಾರಂಭವನ್ನು ಮೇ 21ರಂದು ಸಂಜೆ 5ಕ್ಕೆ ರಂಗಾಯಣದ ಸುವರ್ಣ ಸಾಂಸತಿ ಭವನದಲ್ಲಿ ಏರ್ಪಡಿಸಲಾಗಿದೆ ಎಂದು ಸಂಘಟಕ ಮಾರ್ತಾಂಡಪ್ಪ ಕತ್ತಿ ತಿಳಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ರೇಷ್ಮೆ ಮಾರಾಟ ಮಂಡಳಿ ಮಾಜಿ ಅಧ್ಯೆ ಸವಿತಾ ಅಮರಶೆಟ್ಟಿ, ಸಮಾಜ ಸೇವಕ ಬಸವರಾಜ ಮಲಕಾರಿ, ಬಿಜೆಪಿ ಯುವ ಮೋರ್ಚಾ ಮುಖಂಡ ಶಕ್ತಿ ಹಿರೇಮಠ ಮತ್ತು ಪಂ.ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನದ ಅಧ್ಯಕ್ಷ ಎಂ.ಎಸ್​. ರಾಸ್​ ಅತಿಥಿಗಳಾಗಿ ಆಗಮಿಸುವರು. ಕಲಾಶಕ್ತಿ ಪ್ರತಿಷ್ಠಾನದ ಅಧ್ಯೆ ಅನ್ನರ್ಪೂಣ ಪಾಟೀಲ ಉಪಸ್ಥಿತರಿರುವರು ಎಂದರು.
ಹೊದ ಪ್ರಯೋಗ ಮಾಡುವ ನಿಟ್ಟಿನಲ್ಲಿ ಈ ವರ್ಷ ಆರಂಭಿಸಿದ ಶಿಬಿರದಲ್ಲಿ 3&7ವರ್ಷದ ಮಕ್ಕಳಿಗೆ ನೃತ್ಯ ತರಬೇತಿ ನೀಡಲಾಗಿದೆ. ತರಬೇತಿ ಪಡೆದ ಎಲ್ಲ ಮಕ್ಕಳು ಸಮಾರೋಪ ಸಮಾರಂಭ ಬಳಿಕ ನೃತ್ಯ ಪ್ರದರ್ಶನ ನೀಡಲಿದ್ದಾರೆ. ಈ ಶಿಬಿರವನ್ನು ಮುಂದಿನ ದಿನಗಳಲ್ಲಿ ಪ್ರತಿ ವರ್ಷ ನಡೆಸಲಾಗುವುದು ಎಂದರು.