ಉಪ್ಪುಂದದಲ್ಲಿ ನಡೆಯುತ್ತಿರುವ ಜೆಸಿಐ 20ನೇ ವರ್ಷದ ಸುಮನಸು ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಡಾ.ಗೋವಿಂದ ಬಾಬು ಪೂಜಾರಿ ಅವರಿಗೆ ವಿಂಶತಿರತ್ನ ಪ್ರಶಸ್ತಿ ಪ್ರದಾನಿಸಲಾಯಿತು 
ಜಿಲ್ಲೆ

ಸೇವಾ ಮನೋಭಾವನೆಗೆ ಜೆಸಿಐ ಸಹಕಾರಿ

ಇಂದಿರಾ ಎನ್ ಕೆ

ವಿಜಯವಾಣಿ ಸುದ್ದಿಜಾಲ ಬೈಂದೂರು

ರಾಷ್ಟ್ರಮಟ್ಟದ ಗ್ರಾಮೀಣ ಪ್ರದೇಶದ ಯುವಜನತೆಯಲ್ಲಿ ಆತ್ಮವಿಶ್ವಾಸದ ಜತೆ ಸೇವಾ ಮನೋಭಾವನೆ ಜೆಸಿಐ ಸಂಸ್ಥೆ ಮೂಡಿಸುತ್ತಿದೆ ಎಂದು ಉಪ್ಪುಂದ ಶ್ರೀ ವರಲಕ್ಷ್ಮೀ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಡಾ.ಗೋವಿಂದ ಬಾಬು ಪೂಜಾರಿ ಹೇಳಿದರು.

ಉಪ್ಪುಂದದಲ್ಲಿ ಜೆಸಿಐ 20ನೇ ವರ್ಷದ ಸುಮನಸು ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ವಿಂಶತಿರತ್ನ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
ಜೆಸಿಐ ಅಧ್ಯಕ್ಷ ಮಂಜುನಾಥ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು. ಬಾರ್ಕೂರು ಶ್ರೀ ಏಕನಾಥೇಶ್ವರಿ ದೇವಸ್ಥಾನ ಟ್ರಸ್ಟಿ ಆಲೂರು ರಘುರಾಮ ದೇವಾಡಿಗ, ಹಟ್ಟಿಯಂಗಡಿ ವಸತಿ ಶಾಲಾ ಉಪಪ್ರಾಂಶುಪಾಲ ರಾಮ ದೇವಾಡಿಗ, ಉದ್ಯಮಿಗಳಾದ ಶರತ್‌ಕುಮಾರ್ ಶೆಟ್ಟಿ, ನರಸಿಂಹ ದೇವಾಡಿಗ, ಲಕ್ಷ್ಮೀಕಾಂತ ಬೆಸ್ಕೂರು, ಬಿಇಒ ನಾಗೇಶ ಕೆ.ನಾಯ್ಕ, ಹೇರಂಜಾಲು ಗೆಳೆಯರ ಬಳಗ ಸ್ಥಾಪಕಾಧ್ಯಕ್ಷ ಮಹೇಂದ್ರ ಪೂಜಾರಿ ಯಡೇರಿ, ಉಪ್ಪುಂದ ದೇವಾಡಿಗರ ಸಂಘ ಅಧ್ಯಕ್ಷ ರವೀಂದ್ರ ಎಚ್., ಮಾಜಿ ಅಧ್ಯಕ್ಷ ಬಿ.ಎ.ಮಂಜು ದೇವಾಡಿಗ, ಬೈಂದೂರು ಜೆಸಿಐ ಪೂರ್ವಾಧ್ಯಕ್ಷೆ ಪ್ರಿಯದರ್ಶಿನಿ ಕಮಲೇಶ್, ಸಪ್ತಾಹ ಸಭಾಪತಿ ಗುರುರಾಜ್ ಹೆಬ್ಬಾರ್ ಇದ್ದರು. ಕಾರ್ಯದರ್ಶಿ ನರಸಿಂಹ ವಂದಿಸಿದರು.

ಪ್ರಶಸ್ತಿ ಪ್ರದಾನ

ನಿಕಟಪೂರ್ವಾಧ್ಯಕ್ಷ ಪ್ರದೀಪಕುಮಾರ್ ಶೆಟ್ಟಿ ಅವರಿಗೆ ಕಮಲಪತ್ರ ಪ್ರಶಸ್ತಿ, ಧರ್ಮಶ್ರೀ ರಿಲೀಫ್ ಫೌಂಡೇಶನ್ ಎಂಡಿ ನಾಗರಾಜ ಆರ್.ಸುವರ್ಣ ಅವರಿಗೆ ಸಾಧನಶ್ರೀ ಪ್ರಶಸ್ತಿ, ಪುರಂದರ ಉಪ್ಪುಂದ, ಜಗದೀಶ ದೇವಾಡಿಗ ಅವರಿಗೆ ಯುವ ಜೇಸಿ ಪ್ರಶಸ್ತಿ ಪ್ರದಾನಿಸಲಾಯಿತು. ಅತೀ ಹೆಚ್ಚು ರಕ್ತದಾನ ಮಾಡಿದ ಮೂವರನ್ನು ಗೌರವಿಸಲಾಯಿತು. ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಉದಾತ್ತವಾದ ಸಂಗತಿಗಳು, ಆಲೋಚನೆಗಳು ಜಗತ್ತಿನ ಯಾವುದೇ ಮೂಲೆಯಿಂದ ಬಂದರೂ ಅದನ್ನು ಸ್ವೀಕರಿಸು ಎಂಬ ವಿಚಾರದಂತೆ ಇಲ್ಲಿ ನಡೆಯುತ್ತಿರುವುದು ಸಂತಸದ ವಿಚಾರ. ಯುವ ಮನಸುಗಳನ್ನು ಕಟ್ಟುವಂತಹ ದಿವ್ಯ ಕಾಯಕ, ಯುವಜನತೆಗೆ ಸರಿಯಾದ ಮಾರ್ಗದರ್ಶನ ಎಲ್ಲರೂ ಸೇರಿ ಮಾಡಬೇಕಿದೆ.-ರಾಮ ದೇವಾಡಿಗ, ಉಪಪ್ರಾಂಶುಪಾಲ ಹಟ್ಟಿಯಂಗಡಿ ವಸತಿ ಶಾಲೆ