ಸುಳ್ಯ: ಸಮಾಜಕ್ಕೆ ದುಡಿಯಬೇಕು ಎಂಬ ತುಡಿತ ಇದ್ದವರಿಗೆ ರೋಟರಿ ಕ್ಲಬ್ ಅತ್ಯುತ್ತಮ ವೇದಿಕೆ. ಅದೆಷ್ಟೋ ಮಂದಿ ಹಿರಿಯರ ಸೇವಾ ಮನೋಭಾವದಿಂದ ರೋಟರಿ ಸಂಸ್ಥೆ ಗಟ್ಟಿಯಾಗಿ ಬೆಳೆದಿದೆ ಎಂದು ರೋಟರಿ ಮಾಜಿ ಜಿಲ್ಲಾ ಗವರ್ನರ್ ಕೇಶವ ಎಚ್.ಆರ್. ಹೇಳಿದರು.
ರಥಬೀದಿಯ ರೋಟರಿ ಸಮುದಾಯ ಭವನದಲ್ಲಿ ಸುಳ್ಯ ರೋಟರಿ ಕ್ಲಬ್ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು.
ಅಧ್ಯಕ್ಷ ಡಾ.ರಾಮ್‌ಮೋಹನ್, ಕಾರ್ಯದರ್ಶಿ ಭಾಸ್ಕರನ್ ನಾಯರ್ ಎಂ.ಆರ್., ಖಜಾಂಚಿ ಬಿ.ಟಿ.ಮಾಧವ ನೇತೃತ್ವದ ತಂಡ ಅಧಿಕಾರ ವಹಿಸಿಕೊಂಡರು. ಪುತ್ತೂರು ರೋಟರಿ ಕ್ಲಬ್ ಅಧ್ಯಕ್ಷ ಡಾ.ಶ್ರೀಪ್ರಕಾಶ್ ಬಿ. ಪದಗ್ರಹಣ ನೆರವೇರಿಸಿದರು. ವಲಯ 5ರ ಅಸಿಸ್ಟೆಂಟ್ ಗವರ್ನರ್ ಪ್ರಮೋದ್ ಕುಮಾರ್, ವಲಯ 5ರ ಜೋನಲ್ ಲೆಪ್ಟಿನೆಂಟ್ ಡಾ.ಪುರುಷೋತ್ತಮ ಕೆ.ಜಿ. ಅತಿಥಿಗಳಾಗಿದ್ದರು.
ರೋಟರಿ ಕ್ಲಬ್ ನಿರ್ಗಮನ ಅಧ್ಯಕ್ಷೆ ಯೋಗಿತಾ ಗೋಪಿನಾಥ್, ಕಾರ್ಯದರ್ಶಿ ಭಾಸ್ಕರನ್ ನಾಯರ್ ಎಂ.ಆರ್., ಕೋಶಾಧಿಕಾರಿ ಮಾಧವ ಬಿ.ಟಿ., ಡಾ.ಪಲ್ಲವಿ ಉಪಸ್ಥಿತರಿದ್ದರು. ಯೋಗಿತಾ ಗೋಪಿನಾಥ್ ಸ್ವಾಗತಿಸಿದರು. ನಿರ್ಗಮನ ಕಾರ್ಯದರ್ಶಿ ಡಾ.ಹರ್ಷಿತಾ ಪುರುಷೋತ್ತಮ ವರದಿ ಮಾಚಿಸಿದರು. ಐಷಾನಿ ಕೆ.ಆರ್. ಪ್ರಾರ್ಥಿಸಿದರು. ಕಾರ್ಯದರ್ಶಿ ಭಾಸ್ಕರನ್ ನಾಯರ್ ಎಂ.ಆರ್. ವಂದಿಸಿದರು. ದಳ ಸುಬ್ರಾಯ ಭಟ್ ಕಾರ್ಯಕ್ರಮ ನಿರೂಪಿಸಿದರು.
ಕೊಡುಗೆ ಹಸ್ತಾಂತರ, ಸನ್ಮಾನ
ರೋಟರಿ ವತಿಯಿಂದ ಸುಳ್ಯ ಅಗ್ನಿಶಾಮಕ ಠಾಣೆಗೆ ಕಳೆ ಕೊಚ್ಚುವ ಯಂತ್ರ ಹಸ್ತಾಂತರಿಸಲಾಯಿತು. ತಾಲೂಕಿನಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.