ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಹಲವೆಡೆ ಶನಿವಾರ ಭೂಕಂಪನದ ಅನುಭವ ಆಗಿದೆ. ಕೊಡಗು ಜಿಲ್ಲೆಗೆ ಹೊಂದಿಕೊಂಡಿರುವ ಗೂನಡ್ಕ, ಸಂಪಾಜೆ, ಅಡ್ತಲ ಮೊದಲಾದೆಡೆ ಬೆಳಗ್ಗೆ 9 ಗಂಟೆ ವೇಳೆಗೆ ಕೆಲ ಸೆಕೆಂಡ್‌ಗಳ ಕಾಲಭೂಮಿ ಕಂಪಿಸಿದ ಅನುಭವಕ್ಕೆ ಜನ ಬೆಚ್ಚಿಬಿದ್ದಿದ್ದಾರೆ.