ಜಿಲ್ಲೆ

ಸುಳ್ಯ ದಸರಾ ಸಾಂಸ್ಕೃತಿಕ ವೈಭವ ಸವಾಪನ : ಮುದಗೊಳಿಸಿದ ಸಂಗೀತ ರಸಮಂಜರಿ

ಸೌಮ್ಯ ಆರ್

ಸುಳ್ಯ: ಶ್ರೀ ಶಾರದಾಂಬಾ ದಸರಾ ಸೇವಾ ಟ್ರಸ್ಟ್, ಸಾರ್ವಜನಿಕ ಶ್ರೀ ಶಾರದಾಂಬಾ ಸೇವಾ ಸಮಿತಿ, ದಸರಾ ಉತ್ಸವ ಸಮಿತಿ ಸುಳ್ಯ ತಾಲೂಕು ಹಾಗೂ ಶ್ರೀ ಶಾರದಾಂಬಾ ಉತ್ಸವ ಸಮಿತಿಯ ವತಿಯಿಂದ ಶ್ರೀ ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ ನಡೆಯುತ್ತಿರುವ ಶ್ರೀ ಶಾರದಾಂಬಾ ಉತ್ಸವ ಸುಳ್ಯ ದಸರಾ 2024ರ ಸಾಂಸ್ಕೃತಿಕ ಕಾರ್ಯಕ್ರಮ ಅದ್ದೂರಿ ಸಂಗೀತ ಸೌರಭ ರಸಮಂಜರಿಯ ಮೂಲಕ ಬುಧವಾರ ಸವಾಪನಗೊಂಡಿತು.

ಸಂಗೀತ ನಿರ್ದೇಶಕ ಗುರುಕಿರಣ್ ನೇತೃತ್ವದಲ್ಲಿ ಆರಂಭಗೊಂಡ ಸಂಗೀತ ರಸಮಂಜರಿಯಲ್ಲಿ ಚಲನಚಿತ್ರ ಹಿನ್ನೆಲೆ ಗಾಯಕ, ಸರಿಗಮಪ ಸೀಸನ್ 20ರ ವಿಜೇತ ದರ್ಶನ್ ನಾರಾಯಣ್ ಭಾಗವಹಿಸಿದ್ದರು. ಸ್ಟಾರ್ ಸಿಂಗರ್‌ಗಳಾದ ಅಮಿಶ್ ಕುವಾರ್, ಶಿವಾನಿ ನವೀನ್, ಐಶ್ವರ್ಯ ರಂಗರಾಜನ್, ಅರ್ಫಾಜ್ ಉಲ್ಲಾಳ್ ಸೇರಿದಂತೆ ಹಲವರು ಕಾರ್ಯಕ್ರಮಕ್ಕೆ ಸಾಥ್ ನೀಡಿದರು.

ಕಾರ್ಯಕ್ರಮ ಜರಗುವ ಪೆಂಡಾಲ್ ಒಳಗಡೆ ಪ್ರೇಕ್ಷಕರು ತನ್ಮಯತೆಯಿಂದ ವೀಕ್ಷಿಸುತ್ತಿದ್ದರೆ ಹೊರಗಡೆ ಮಳೆ ಜಿನುಗುತ್ತಿತ್ತು. ಹಾಗಿದ್ದರೂ ನಿರೀಕ್ಷೆಗೂ ಮೀರಿ ಜನರು ಆಗಮಿಸಿ ಕಾರ್ಯಕ್ರಮ ವೀಕ್ಷಿಸಿದ್ದು, ಕಾರ್ಯಕ್ರಮದ ಯಶಸ್ಸಿಗೆ ಕಾರಣವಾಯಿತು.