ವಿಜಯವಾಣಿ ಸುದ್ದಿಜಾಲ ಸೂಲಿಬೆಲೆ
ಸ್ವಾತಂತ್ರ್ಯಕ್ಕಾಗಿ ಲಕ್ಷಾಂತರ ಜೀವಗಳು ತ್ಯಾಗ ಮತ್ತು ಬಲಿದಾನಗೈದಿವೆ ಎಂದು ವಿವೇಕಾನಂದ ಪ್ರೌಢಶಾಲೆ ಕಾರ್ಯದರ್ಶಿ ವಿ.ಪ್ರಸಾದ್ ಅಭಿಪ್ರಾಯಪಟ್ಟರು.
ವಿವೇಕಾನಂದ ಪ್ರೌಢಶಾಲೆಯಲ್ಲಿ ಧ್ವಜಾರೋಹಣ ನೆರವೇರಿಸಿ, ಮಾತನಾಡಿದರು. ಭಾರತಕ್ಕೆ ತನ್ನದೆ ಆದ ಇತಿಹಾಸ ವೈಶಿಷ್ಟ್ಯವಿದೆ. ಅನೇಕ ಬಾರಿ ಆಕ್ರಮಣಗಳು ನಡೆದರೂ ತನ್ನ ತನವನ್ನು ಉಳಿಸಿಕೊಂಡಿದೆ. ಸಿಪಾಯಿ ಧಂಗೆಯ ಮೂಲಕ ಪ್ರಾರಂಭವಾದ ಹೋರಾಟ ಸ್ವಾತಂತ್ರ್ಯ ಪಡೆಯುವಲ್ಲಿ ಯಶಸ್ಸು ಕಂಡಿದೆ. ಇದನ್ನು ನಾವುಗಳು ಹಬ್ಬದ ಮಾದರಿಯಲ್ಲಿ ಆಚರಣೆ ಮಾಡಬೇಕು. ಯುವ ಪೀಳಿಗೆಗೆ ಹೋರಾಟದ ಪರಿಕಲ್ಪನೆ ಮೂಡಿಸಬೇಕು ಎಂದರು. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ವಿದ್ಯಾರ್ಥಿಗಳಿಂದ ಪಥ ಸಂಚಲನ ನೆಡೆಯಿತು.